Coastal Bulletin

ತಿರುವನಂತಪುರ:ಕೇರಳದಲ್ಲಿ ಕೊರೋನಾ ವೈರಸ್‌ ಅಬ್ಬರದ ಮಧ್ಯೆ ಝಿಕಾ ವೈರಸ್‌ ಹರಡುವ ಭೀತಿ ಎದುರಾಗಿದ್ದು 24 ವರ್ಷದ ಗರ್ಭಿಣಿ ಮಹಿಳೆಯಲ್ಲಿ ಝೀಕಾ ವೈರಸ್‌ನ ಮೊದಲ ಪ್ರಕರಣ ದೃಢಪಟ್ಟಿದೆ.

ಈ ಬಗ್ಗೆ ಸ್ಪಷ್ಟಪಡಿಸಿದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪುಣೆಯ ನ್ಯಾಷನಲ್‌ ಇನ್‌ಸ್ಟೀಟ್ಯೂಟ್‌ ಆಫ್‌ ವೈರಾಲಜಿಗೆ ಕಳುಹಿಸಿಕೊಡಲಾದ 19 ಸ್ಯಾಂಪಲ್ ಗಳ ಪೈಕಿ 1 ಪಾಸಿಟಿವ್‌ ಎಂದು ದೃಢಪಟ್ಟಿದೆ. 13 ಮಾದರಿ ಝೀಕಾ ವೈರಸ್‌ ಪಾಸಿಟಿವ್‌ ಆಗಿರಬಹುದಾದ ಶಂಕೆ ವ್ಯಕ್ತವಾಗಿದ್ದು ಈ ಎಲ್ಲಾ ಪ್ರಕರಣಗಳು ತಿರುವನಂತಪುರಂನಲ್ಲೇ ದಾಖಲಾಗಿವೆ ಎಂದು ತಿಳಿಸಿದ್ದಾರೆ. 

ಜ್ವರ, ತುರಿಕೆ, ಮೈಕೈ ನೋವು, ಕಣ್ಣಿನ ತುರಿಕೆ ಝೀಕಾ ವೈರಸ್‌ನ ಲಕ್ಷಣಗಳಾಗಿದ್ದು ಸೊಳ್ಳೆಗಳ ಮೂಲಕ ಹರಡುವ ಕಾಯಿಲೆಯಾಗಿದೆ. ಇವು ವಾಸಿಯಾಗಲು 2ರಿಂದ 7 ದಿನ ತೆಗೆದುಕೊಳ್ಳುತ್ತವೆ.ಹೆಚ್ಚಿನವರಲ್ಲಿ

ಝೀಕಾ ವೈರಸ್‌ನ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಈ ವೈರಸ್‌ನಿಂದ ಸಾವಿನ ಸಾಧ್ಯತೆ ತೀರಾ ಕಡಿಮೆ. ಆದರೆ, ಗರ್ಭಿಣಿಯರಲ್ಲಿ ಈ ವೈರಸ್‌ ಮಾರಕವಾಗಿ ಪರಿಣಮಿಸುವ  ಸಾಧ್ಯತೆ ಇದ್ದು ಮುನ್ನೆಚ್ಚರಿಕೆ ಅತ್ಯಗತ್ಯ.

1947ರಲ್ಲಿ ಉಗಾಂಡದಲ್ಲಿ ಮಂಗಗಳಲ್ಲಿ ಮೊದಲು ಪತ್ತೆಯಾದ ಝೀಕಾ ವೈರಸ್‌ ಬಳಿಕ 1952ರಲ್ಲಿ ಮನಷ್ಯರಲ್ಲಿ ಈ ವೈರಸ್‌ ಕಾಣಿಸಿಕೊಂಡಿತು. ಆಫ್ರಿಕಾ, ಅಮೆರಿಕ, ಏಷ್ಯಾದ ರಾಷ್ಟ್ರಗಳಲ್ಲಿ ಈ ವೈರಸ್‌ ಪತ್ತೆ ಆಗಿವೆ.  

ಭಾರತದ ಜೈಪುರ ದಲ್ಲಿ ಮೊದಲ ಝೀಕಾ ವೈರಸ್‌ ಕೇಸ್‌  2018ರಲ್ಲಿ ಪತ್ತೆಯಾಯಿತು.ಜೈಪುರದಲ್ಲಿ ಝೀಕಾ ವೈರಸ್‌ನ 80 ಪ್ರಕರಣಗಳು ಪತ್ತೆ ಆಗಿದ್ದವು.

Leave a Comment