Coastal Bulletin

ವಾರ ಭವಿಷ್ಯ

ಮೇಷ

ಇತರರ ಸಹಾಯಕ್ಕೆ ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿಮ್ಮದಾಗಿತ್ತದೆ. ಸಹಾಯ ಮಾಡಿದಲ್ಲಿ ನಿಮ್ಮ ಬಗ್ಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಕಾಣಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಬಹುದು. ಮುಂದಾಲೋಚನೆ ಮಾಡಿ ಕೆಲಸ ಮಾಡಿ,ಯಶಸ್ಸು ನಿಮ್ಮದಾಗುತ್ತದೆ.ಅಡೆತಡೆಗಳಿಂದ ಅರ್ಧಕ್ಕೆ ನಿಂತಿದ್ದ ಕೆಲವು ಕೆಲಸಗಳು ಈಗ ನಿಧಾನವಾಗಿ ಮುಂದುವರೆಯುತ್ತವೆ. ಅನಿರೀಕ್ಷಿತ ದುಂದು ವೆಚ್ಚಗಳು ನಿಮ್ಮ ಮೈಮೇಲೆ ಬರಬಹುದು. ವಿದೇಶಿ ವ್ಯವಹಾರ ಮಾಡುವವರ ಆದಾಯದಲ್ಲಿ ಏರಿಕೆಯಾಗುತ್ತದೆ. ಹಣಕಾಸಿನ ಸಂಸ್ಥೆಗಳಿಗೆ ಬರಬೇಕಾಗಿದ್ದ ಬಾಕಿ ಹಣ ಬರುತ್ತದೆ.ಸಂಗಾತಿಗೆ ಅವರ ಹಿರಿಯರಿಂದ ಧನಸಹಾಯ ಬರುತ್ತದೆ. ಸ್ಥಿರಾಸ್ತಿಯ ಬಗ್ಗೆ ಇದ್ದ ತಕರಾರುಗಳು ಪರಿಹಾರ ಕಾಣಲಿದೆ.ಉದ್ಯೋಗ ಕ್ಷೇತ್ರದಲ್ಲಿ ಬಹಳ ಲವಲವಿಕೆಯುಳ್ಳ ಕಾಲ, ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗಳು ಕೇಳಿ ಬರುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಒತ್ತಡ ಕಂಡರು ಸ್ನೇಹಿತರ ಸಹಕಾರದಿಂದ ಅದು ಪರಿಹಾರ ವಾಗುತ್ತದೆ.

ವೃಷಭ  

ಸಂಸಾರದ ಗೊಂದಲ ನಿಮಾರಣೆಯಾಗಿ ಹೊಂದಾಣಿಕೆಯಲ್ಲಿ ಪ್ರಗತಿ ಇರುತ್ತದೆ. ಹೊಸ ಆದಾಯದ ಮೂಲವನ್ನು ಹುಡುಕುವಿರಿ. ಕಳೆದುಹೋಗಿದ್ದ ಕೆಲವು ವಸ್ತುಗಳು ಪುನಃ ದೊರೆಯುವ ಸಾಧ್ಯತೆ ಇದೆ. ಮಕ್ಕಳಿಗಾಗಿ ಹೆಚ್ಚು ಖರ್ಚು ಮಾಡಬೇಕಾದ ಪರಿಸ್ಥಿತಿ ಬರುತ್ತದೆ.ಟೆಕ್ನಿಕಲ್ ವಿಷಯ ಪರಿಣಿತರಿಗೆ ಉತ್ತಮ ಆದಾಯ ನಿರೀಕ್ಷಿಸಬಹುದು.ಆಸ್ತಿಯ ಬೆಲೆಯ ಬಗ್ಗೆ ವಾಗ್ವಾದ ಆರಂಭವಾಗಬಹುದು. ಅಧ್ಯಾಪಕರುಗಳಿಗೆ ಬರಬೇಕಾಗಿದ್ದ ಬಾಕಿ ಹಣ ಬರುತ್ತವೆ. ತಂದೆಯಿಂದ ಕೃಷಿಭೂಮಿ ಬಳುವಳಿಯಾಗಿ ಸಿಗಬಹುದು.ನ್ಯಾಯವಾದಿಗಳಿಗೆ ಹೆಚ್ಚಿನ ಅವಕಾಶ ದೊರೆತು ಹೆಚ್ಚು ಸಂಪಾದನೆಯಾಗುತ್ತದೆ.

ವ್ಯವಹಾರದಲ್ಲಿ ಪರಿಶ್ರಮಕ್ಕೆ ತಕ್ಕ ಆದಾಯವೂ ಬರುತ್ತದೆ.ರಾಜಕೀಯ ಮುಖಂಡರುಗಳಿಗೆ ಜನರೆದುರಿಗೆ ಮುಖಭಂಗ ಅನುಭವಿಸುವ ಸಂದರ್ಭವಿದೆ ಎದುರಾಗುತ್ತದೆ.ಸಂಗಾತಿಯ ಸಹಾಯದಿಂದ ಕೆಲಸಕಾರ್ಯಗಳಲ್ಲಿ ಪ್ರಗತಿ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಚರ್ಚೆ ಮನೆಯಲ್ಲಿ ನಡೆಯುತ್ತದೆ

ಮಿಥುನ

ಪ್ರಮುಖವಾದ ಸಮಸ್ಯೆಯನ್ನು ಅತ್ಯಂತ ನಾಜೂಕಾಗಿ ಪರಿಹರಿಸುವಿರಿ. ರಾಜಕೀಯ ಹಿನ್ನೆಲೆಯ ವ್ಯಕ್ತಿಗಳು ಜಾಗರೂಕತೆಯಿಂದ ಸಾರ್ವಜನಿಕ ಜೀವನ‌ ನಡೆಸಬೇಕು.ತಾಯಿಯ ಆರೋಗ್ಯದ ಬಗ್ಗೆ ಗಮನಹರಿಸಿರಿ.ಕ್ರೀಡಾಪಟುಗಳಿಗೆ ಧನಸಹಾಯ ದೊರೆತು ಹೆಚ್ಚು ಅಭ್ಯಾಸಕ್ಕೆ ಅನುಕೂಲವಾಗುತ್ತದೆ.ಬಡಬಗ್ಗರಿಗೆ ದಾನಮಾಡಿ ಹೆಚ್ಚು ಸಂತೋಷವನ್ನು ಕಾಣುತ್ತೀರಿ.ಸ್ವಲ್ಪ ಆರೋಗ್ಯ ತೊಂದರೆ ಕಾಣಿಸಬಹುದು. ತಂದೆಯ ಹಿತೋಕ್ತಿಗಳು ನಿಮಗೆ ಒಳಿತನ್ನು ತರುತ್ತವೆ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ವೃತ್ತಿಯಲ್ಲಿ ನಿಮ್ಮ ಸ್ಥಾನ ಗುರುತಿಸಲ್ಪಡುತ್ತದೆ.ವಿದ್ಯಾರ್ಥಿಗಳಿಗೆ ಸಾಕಷ್ಟು ಯಶಸ್ಸು ಒದಗಿಬರುತ್ತದೆ.ಒಂದು ರೀತಿಯ ಆಲಸ್ಯ ಮನೆಮಾಡಿರುತ್ತದೆ. ಬಂಧುಗಳೊಡನೆ ವ್ಯವಹರಿಸುವಾಗ ನಿಷ್ಕಲ್ಮಶ ಮನಸ್ಸಿನಿಂದ ವ್ಯವಹರಿಸಿರಿ, ಆಗ ಉತ್ತಮ ಬಾಂಧವ್ಯ ಮೂಡುತ್ತದೆ.

ಕಟಕ

ದೊಡ್ಡ ನಿರ್ಧಾರಗಳನ್ನು ಕೈಗೊಳ್ಳುವಾಗ ಎಚ್ಚರಿಕೆ ಅತ್ಯಗತ್ಯ.ಉದ್ವೇಗಕ್ಕೆ ಒಳಗಾಗದಿರಿ. ತಾಳ್ಮೆಯಿಂದ ನಡೆದುಕೊಂಡಲ್ಲಿ ಉತ್ತಮ‌ ಫಲಿತಾಂಶ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಸಾಲ ಕೊಡುವ ವಿಚಾರವನ್ನು ಕೈಬಿಡಿರಿ. ಉದ್ಯೋಗಸ್ಥ ಮಹಿಳೆಯರಿಗೆ ಉದ್ಯೋಗದಲ್ಲಿ ಪ್ರಶಂಸೆ ಸಿಗುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ.ಆಧ್ಯಾತ್ಮಿಕ ಜೀವನವನ್ನು ಅನುಸರಿಸುತ್ತಿರುವವರಿಗೆ ಹೆಚ್ಚಿನ ನೆಮ್ಮದಿ ಬರುತ್ತದೆ. ಪತ್ರಿಕಾರಂಗದವರಿಗೆ ಕೆಲವೊಂದು ವಿಚಾರಗಳಿಗೆ ಹೆಚ್ಚು ಪ್ರಶಂಸೆ ದೊರೆಯುತ್ತದೆ. ಹಣದ ಒಳಹರಿವು ನಿಧಾನಗತಿಯಲ್ಲಿ ಇರುತ್ತದೆ.

ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಸಂತಸ ಪಡುವಿರಿ.ವಯಸ್ಕರಿಗೆ ಸಂಬಂಧಗಳು ಕೂಡಿಬರಬಹುದು. ತಾಯಿಯಿಂದ ಸಹಾಯ ದೊರೆಯುವ ಸಾದ್ಯತೆ ಇದೆ. ರಾಜಕಾರಣಿಗಳಿಗೆ ಉತ್ತಮ ವಾರ, ಅವರ ಬಹು ದಿನಗಳ ಆಸೆಯೊಂದು ಈಡೇರುವ ಸಂದರ್ಭ ಇದೆ. ಗೃಹಿಣಿಯರಿಗೆ ಕೆಲಸದ ಒತ್ತಡ ಹೆಚ್ಚಾಗುವುದು.

ಸಿಂಹ

ಅನಗತ್ಯ ಒತ್ತಡವು ನಿಮಗೆ ದೈಹಿಕ ಅಸ್ವಸ್ಥತೆಯನ್ನು ನೀಡುತ್ತದೆ ಆದ್ದರಿಂದ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ.ಕೃಷಿ ಕ್ಷೇತ್ರದಲ್ಲಿರುವವರು ಉಪಕರಣಗಳನ್ನು ಬಳಸುವಾಗ ಪೆಟ್ಟಾಗುವ ಸಂದರ್ಭವಿದೆ. ಮಕ್ಕಳ ಆರೋಗ್ಯದ ಬಗ್ಗೆ ಸೂಕ್ತ ಗಮನ ಕೊಡುವುದು ಮುಖ್ಯ. ರಾಜಕೀಯ ರಂಗದವರಿಗೆ ತುರುಸಿನ ಓಡಾಟಗಳು ಇರುತ್ತವೆ. ಸೇವಕ ವರ್ಗದವರಿಂದ ಸ್ವಲ್ಪ ಧನ ನಷ್ಟ ಆಗಬಹುದು. ಕೆಲವೊಂದು ಸಮಸ್ಯೆಗಳ ಪರಿಹಾರಕ್ಕಾಗಿ ದೈವ ಕಾರ್ಯಗಳಲ್ಲಿ ತೊಡಗುವಿರಿ.ಸಂಗಾತಿಯ‌ ಮಾತನ್ನು ಈಡೇರಿಸಲು ಹೋಗಿ ಮುಜುಗರಕ್ಕೆ ಸಿಲುಕುವ ಸಾದ್ಯತೆ. ಅವಿವಾಹಿತರಿಗೆ ವಿವಾಹ ಸಂಬಂಧ ಒದಗಿಬರುವ ಸಾಧ್ಯತೆ ಇದೆ.ಮಕ್ಕಳಿಂದ ನಿಮಗೆ ಧನಸಹಾಯವಿರುತ್ತದೆ. ಆಹಾರದಿಂದ ಅನಾರೋಗ್ಯದ ಸಾಧ್ಯತೆಯಿದೆ.ಅತಿಯಾದ ಆತ್ಮಗೌರವ ನಿಮ್ಮನ್ನು ಕಾಡಬಹುದು. ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯ ದೊರೆಯುವ ಲಕ್ಷಣಗಳಿವೆ. ನಿಮ್ಮ ಕಠಿಣ ಮಾತಿನಿಂದ ಕೈಕೆಳಗಿನ ಕೆಲಸಗಾರರು ತಿರುಗಿಬೀಳಬಹುದು.

ಕನ್ಯಾ

ಸಮಸ್ಯೆಗಳನ್ನು ಅದ್ಭುತ ರೀತಿಯಲ್ಲಿ ಪರಿಹರಿಸಲು ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸುತ್ತೀರಿ.ಕುಟುಂಬದಲ್ಲಿನ ಕೆಲವು ಸಮಸ್ಯೆಗಳಿಗೆ ಬಂಧುಗಳಿಂದ ಪರಿಹಾರ ದೊರೆಯುತ್ತದೆ. ಸರ್ಕಾರದಿಂದ ಕೆಲವೊಂದು ಸಹಾಯಧನ ಬರುವುದು ತಡವಾಗಬಹುದು. ಮಹಿಳೆಯರ ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಸೋದರರ ಸಹಾಯದಿಂದಾಗಿ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆಯನ್ನು ಕಾಣಬಹುದು. ಸಹೋದ್ಯೋಗಿಗಳ ಮಧ್ಯಸ್ಥಿಕೆಯಿಂದ ವೃತ್ತಿಯಲ್ಲಿನ ಗೋಜಲುಗಳು ಪರಿಹಾರವಾಗುತ್ತವೆ.ಸಂತಸದ ಕಾರ್ಯಗಳಲ್ಲಿ ಭಾಗವಹಿಸಲು ಬಂಧುಗಳಿಂದ ಕರೆ

ಬರುತ್ತದೆ.ಕೃಷಿಕರಿಗೆ ತಮ್ಮ ಸೌಲಭ್ಯದ ಜೊತೆಗೆ ಅನುದಾನ ದೊರೆಯುತ್ತದೆ. ನಿರೀಕ್ಷಿತ ಮಟ್ಟದಲ್ಲಿ ಹಣದ ಹರಿವು ಇರುತ್ತದೆ. ಕೆಲವರಿಗೆ ವ್ಯವಹಾರ ನಿಮಿತ್ತ ದೂರ ಪ್ರಯಾಣದ ಸಾಧ್ಯತೆಗಳಿವೆ.

ತುಲಾ

ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ಸಾಮರಸ್ಯದ ಸಂಬಂಧವನ್ನು ಕಾಪಾಡಿಕೊಳ್ಳುತ್ತೀರಿ.ಉದ್ಯೋಗ ಬದಲಾವಣೆಯಾಗಿ ಆದಾಯ ದೊರೆಯುವ ಜಾಗ ಸಿಗುತ್ತದೆ. ಗೃಹ ನಿರ್ಮಾಣ ಕಾರ್ಯಗಳನ್ನು ಮುಂದೂಡಬೇಕಾದ ಪರಿಸ್ಥಿತಿ ಎದುರಾಗಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಉನ್ನತ ಅಧ್ಯಯನವನ್ನು ಮಾಡಬೇಕೆನ್ನುವವರು ಈಗ ಯತ್ನಿಸಬಹುದು. ಸ್ವಂತ ಆರೋಗ್ಯದ ಬಗ್ಗೆ ಗಮನಹರಿಸುವುದು ಅಗತ್ಯ. ಗಣ್ಯ ವ್ಯಕ್ತಿಗಳ ಸಹಕಾರದಿಂದ ಕೆಲವೊಂದು ಕೆಲಸಗಳು ಆಗುತ್ತವೆ. ಪಾಲುದಾರಿಕೆಯ ವ್ಯವಹಾರಗಳಲ್ಲಿ ನಿಮಗೆ ಸ್ವಲ್ಪ ಲಾಭಬರುತ್ತದೆ. ಸಂಗಾತಿಯ ಕಡೆಯ ಹಿತಶತ್ರುಗಳ ಬಗ್ಗೆ ಎಚ್ಚರವಹಿಸಿರಿ. ಅತಿಯಾದ ಮಾತಿನಿಂದ ನೆರೆಹೊರೆಯವರೊಡನೆ ಕಲಹ ಏರ್ಪಡಬಹುದು. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ.

ವೃಶ್ಚಿಕ

ನೀವು ಕೆಲಸದ ಸ್ಥಳದಲ್ಲಿ ಉನ್ನತ ಹುದ್ದೆಗೆ ಬಡ್ತಿ ಪಡೆಯುವ ಸಾಧ್ಯತೆಯಿದೆ.ಹೂಡಿಕೆ ಮಾಡುವ ವಿಷಯಗಳಲ್ಲಿ ಬಹಳ ಎಚ್ಚರವಿರಲಿ. ಆದಾಯಕ್ಕಿಂತ ಖರ್ಚು ಹೆಚ್ಚಿಗೆ ಇರುತ್ತದೆ. ಕೆಲವೊಂದು ಕೃಷಿ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುತ್ತದೆ. ಸ್ಥಿರಾಸ್ತಿಯನ್ನು ಕೊಳ್ಳುವ ವಿಷಯದ ಮಾತುಕತೆಯಲ್ಲಿ ಪ್ರಗತಿಯನ್ನು ಕಾಣಬಹುದು. ಕೆಲವರ ಆರೋಗ್ಯ ಸ್ವಲ್ಪ ವ್ಯತ್ಯಾಸವಾಗಿ ಚಿಕಿತ್ಸೆಗೆ ಹೆಚ್ಚು ಹಣ ಖರ್ಚಾಗಬಹುದು. ದಾಯಾದಿಗಳೊಂದಿಗೆ ಇದ್ದ ಆಸ್ತಿಯ ವ್ಯವಹಾರಗಳು ಇತ್ಯರ್ಥಕ್ಕೆ ಬರುತ್ತವೆ. ಸಣ್ಣಸಣ್ಣ ವಿಚಾರಗಳಿಗೆ ತಲೆಕೆಡಿಸಿಕೊಂಡು ಮಾನಸಿಕ ನೆಮ್ಮದಿ ಕಳೆದುಕೊಳ್ಳಬೇಡಿ.ಹಿರಿಯರಿಗೆ ವಾಹನ ಖರೀದಿಯ ಯೋಗ ಕೂಡಿಬರುತ್ತದೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಬರಬಹುದು. ಕೃಷಿ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣಬಹುದು.

ಧನು

ನಿಮ್ಮ ಅಗತ್ಯಗಳಿಗಾಗಿ ನೀವು ಹಣವನ್ನು ಖರ್ಚು ಮಾಡಬಹುದು.ಅದೃಷ್ಟ ನಿಮ್ಮ ಪಾಲಿಗಿದದ್ದು ನಿಮ್ಮ ಕೆಲಸಗಳಲ್ಲಿ ಜಯ ದೊರೆಯುತ್ತದೆ. ಕೃಷಿ ಕೆಲಸಗಳು ಸುಗಮವಾಗಿ ಆಗುತ್ತವೆ. ಸ್ವಂತ ಉದ್ದಿಮೆಯನ್ನು ನಡೆಸುತ್ತಿರುವವರಿಗೆ ಏರಿಳಿತ ಕಂಡುಬಂದರೂ ನಷ್ಟ ಇರುವುದಿಲ್ಲ. ಕೆಲವೊಂದು ಋಣ ಪರಿಹಾರದಿಂದ ನಿರಾಳತೆಯನ್ನು ಕಾಣುವಿರಿ. ಮಾತನಾಡುವಾಗ ಒರಟುತನ ಪ್ರದರ್ಶನ ಮಾಡಬೇಡಿ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆಯನ್ನು ಕಾಣತ್ತದೆ. ಹಣದ ವಿಷಯದ ಅನುಮಾನಗಳು ಪರಿಹಾರವಾಗುತ್ತವೆ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಇರುತ್ತದೆ. ಕೃಷಿಕರ ಬೆಳೆಗಳಿಗೆ ನಿರೀಕ್ಷಿತ ಬೆಲೆ ದೊರೆತು ಸಂತಸವಾಗುತ್ತದೆ.ಉಪಾಧ್ಯಾಯರಿಗೆ ಗೌರವ ಸಿಗುತ್ತದೆ. ಹೈನುಗಾರಿಕೆ ಮಾಡುವವರಿಗೆ ಹೆಚ್ಚಿನ ಲಾಭ ಬರುತ್ತದೆ ಮತ್ತು ಅವರು ತಯಾರಿಸುವ ಕ್ಷೀರೋತ್ಪನ್ನಗಳಿಗೆ ಉತ್ತಮ ಬೇಡಿಕೆ ಬರುತ್ತದೆ

ಮಕರ

ಕೆಲಸಕ್ಕೆ ಸಂಬಂಧಿಸಿದ ಒತ್ತಡ ನಿಮ್ಮನ್ನು ಸಂಪೂರ್ಣವಾಗಿ ದಣಿಸುತ್ತದೆ.ಸಹೋದ್ಯೋಗಿಗಳಿಂದ ಮೇಲಧಿಕಾರಿಗಳ ಅವಕೃಪೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳಲು ತಾಳ್ಮೆ ಮತ್ತು ಬುದ್ಧಿವಂತಿಕೆಯನ್ನು ಬಳಸಿರಿ. ಗೃಹಿಣಿಯರು ಗೃಹ ಉಪಯೋಗಿ ವಸ್ತುಗಳನ್ನು ಖರೀದಿಸಲು ಬೇಗ ಮುಂದಾಗುವರು. ಆರ್ಥಿಕ ಸಮಸ್ಯೆ ಪರಿಹಾರವಾಗಿ ಋಣಮುಕ್ತರಾಗುವ ಲಕ್ಷಣಗಳಿವೆ. ವಿವಾಹ ಆಕಾಂಕ್ಷಿಗಳಿಗೆ ವಿವಾಹ ಸಂಬಂಧಗಳು ಕೂಡಿ ಬರಬಹುದು. ನೀವು ದೃಢನಿರ್ಧಾರ ಇಟ್ಟು ಮಾಡಿದ ಕೆಲಸಗಳಲ್ಲಿ ಜಯವಿರುತ್ತದೆ.ಮನಸ್ಸಿಗೆ ಸಂತೋಷವಾಗುವ ಶುಭ ಸುದ್ದಿಯನ್ನು ಕೇಳುವಿರಿ. ಬಂಧುಗಳ ಮಧ್ಯೆ ಇರುವ ಮನಸ್ತಾಪವನ್ನು ಮಾತುಕತೆ ಮಾಡಿ ಪರಿಹರಿಸಿಕೊಳ್ಳುವಿರಿ.

ಕುಂಭ

ಈ ತಿಂಗಳು ಲಾಭದ ಕೆಲವು ಘನ ಅವಕಾಶಗಳನ್ನು ತರುತ್ತದೆ.ಹೊಸ ಯೋಜನೆಯನ್ನು ಪ್ರಾರಂಭಿಸುವ ಮುನ್ನ ಅನುಭವಿಗಳ ಮಾತುಗಳನ್ನು ಕೇಳುವುದು ಉತ್ತಮ. ಯುವಕರು ತಾಳ್ಮೆ ಕೆಟ್ಟು ಮಿತಿಮೀರಿ ಮಾತನಾಡುವುದು ಬೇಡ. ನ್ಯಾಯಾಲಯದ ಕಟ್ಟಳೆಗಳಲ್ಲಿ ಯಶಸ್ಸಿನ ಹಾದಿ ಇರುತ್ತದೆ. ಮಹಿಳೆಯರು ಕೆಲದಿನಗಳ ಮಟ್ಟಿಗೆ ರಾಜಕೀಯ ವಿಷಯಗಳಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸುವುದು ಬೇಡ. ರೈತಾಪಿ ವರ್ಗದವರು ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಬಂಧುಗಳೊಡನೆ ಬಾಂಧವ್ಯವನ್ನು ಗಟ್ಟಿ ಮಾಡಿಕೊಳ್ಳುವಿರಿ.ಬೆಂಕಿಯೊಡನೆ ಕೆಲಸ ಮಾಡುವವರು ಕಣ್ಣಿನ ಬಗ್ಗೆ ಎಚ್ಚರವಹಿಸಿರಿ. ಕೆಲವು ಮಹಿಳೆಯರಿಗೆ ತವರಿನಿಂದ ಆಸ್ತಿ ದೊರೆಯುವ ಸಾಧ್ಯತೆಯಿದೆ.ಸಹೋದರರ ಕಷ್ಟಗಳಿಗೆ ಸಹಾಯ ಮಾಡುವಿರಿ. ಮಕ್ಕಳ ಬಗ್ಗೆ ಶುಭ ವಾರ್ತೆಗಳನ್ನು ಕೇಳುವಿರಿ. ಧಾರ್ಮಿಕ ಸಂಸ್ಥೆಗಳನ್ನು ನಡೆಸುವವರಿಗೆ ಅಭಿವೃದ್ಧಿ ಇದೆ.

ಮೀನ

ನೀವು ಯಾರನ್ನಾದರೂ ಇಷ್ಟಪಟ್ಟರೆ, ನೀವು ಅವಳ ಪ್ರೀತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತೀರಿ.ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರುವುದು ಬಹಳ ಉತ್ತಮ. ಗೃಹೋದ್ಯಮವನ್ನು ಮಾಡುತ್ತಿರುವವರಿಗೆ ವ್ಯವಹಾರದಲ್ಲಿ ವಿಸ್ತರಣೆಯನ್ನು ಕಾಣಬಹುದು. ನೂತನ ಗೃಹದ ಒಳಾಂಗಣ ಅಲಂಕಾರಗಳ ಬಗ್ಗೆ ಚಿಂತನೆ ಮಾಡುವಿರಿ. ಅಗತ್ಯಕ್ಕಿಂತ ಹೆಚ್ಚು ಹಿರಿಯರ ಓಲೈಕೆಯನ್ನು ಮಾಡಿ ನಿಮ್ಮ ಕಾರ್ಯಗಳನ್ನು ಮಾಡಿಕೊಳ್ಳುವಿರಿ. ಸ್ಥಿರಾಸ್ತಿಯನ್ನು ಖರೀದಿಸುವ ವಿಷಯದಲ್ಲಿ ಹೆಚ್ಚು ಮುತುವರ್ಜಿ ತೋರುವಿರಿ. ಸರ್ಕಾರಿ ಕೆಲಸಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸನ್ನು ಕಾಣಬಹುದು. ಮುಖ ಅಲಂಕಾರಿಕ ವಸ್ತುಗಳನ್ನು ಉಪಯೋಗಿಸುವಾಗ ಎಚ್ಚರವಿರಲಿ ಅವುಗಳಿಂದ ಚರ್ಮ ಕಾಯಿಲೆ ಬರಬಹುದು.ಗೃಹಾಲಂಕಾರ ವಸ್ತುಗಳನ್ನು ಖರೀದಿಸುವ ಸಾಧ್ಯತೆಯಿದೆ. ಭೂ ಸಂಬಂಧಿ ವ್ಯವಹಾರಗಳನ್ನು ನಡೆಸುವವರಿಗೆ ವ್ಯವಹಾರ ಹೆಚ್ಚಾಗಿ ಲಾಭ ಬರುತ್ತದೆ.

Leave a Comment