ಕೋಗಿಲು ಮನೆಗಳ ತೆರವು: ಕೇರಳ ಸಿಎಂ, ಎಂಪಿ ಎಂಟ್ರಿ ಬೆನ್ನಲ್ಲೇ ಹೊಸ ಮನೆ ನೀಡಲು ತೀರ್ಮಾನ

Coastal Bulletin
ಕೋಗಿಲು ಮನೆಗಳ ತೆರವು: ಕೇರಳ ಸಿಎಂ, ಎಂಪಿ ಎಂಟ್ರಿ ಬೆನ್ನಲ್ಲೇ ಹೊಸ ಮನೆ ನೀಡಲು ತೀರ್ಮಾನ

ಬೆಂಗಳೂರು: ನಗರದ ಕೋಗಿಲು (kogilu) ಲೇಔಟ್​​ನ ಅಕ್ರಮ ಒತ್ತುವರಿ ತೆರವು ಕಾರ್ಯಚರಣೆ, ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಕದನ ಸೃಷ್ಟಿಸಿದೆ.ಈ ವಿಚಾರಕ್ಕೆ ಕೇರಳ ಸರ್ಕಾರ ಎಂಟ್ರಿ ಕೊಟ್ಟಿದ್ದು, ಹಂತಹಂತವಾಗಿ ರಾಜ್ಯ ಸರ್ಕಾರವನ್ನ ಟೀಕಿಸುವ ಕೆಲಸ ಮಾಡುತ್ತಿದೆ. ಈ ಮಧ್ಯೆ ಕೋಗಿಲು ಲೇಔಟ್ ಸಂತ್ರಸ್ತರಿಗೆ ಬೇರೆ ಕಡೆ ವಸತಿ ನೀಡಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ವಸತಿ ಸಚಿವ ಜಮೀರ್ ಅಹ್ಮದ್ (Zameer Ahmed)​​ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

180 ಮನೆ ನೀಡಲು ಒಪ್ಪಿಗೆ

ಬೈಯಪ್ಪನಹಳ್ಳಿ ಬಳಿ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ 1200 ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಆ ಮನೆಗಳಲ್ಲಿ ಇಲ್ಲಿರುವ ನಿವಾಸಿಗಳಿಗೆ ಮನೆಗಳನ್ನು ನೀಡಲು ಸರ್ಕಾರ ತಿರ್ಮಾನಿಸಿದೆ. ಹೋರಾಟಗಾರರು 250 ಮನೆಗಳನ್ನು ಕೇಳಿದ್ದರು. ಆದರೆ ವಸತಿ ಇಲಾಖೆಯಿಂದ 180 ಮನೆ ನೀಡಲು ಒಪ್ಪಿಗೆ ನೀಡಲಾಗಿದ್ದು, ರಿಜಿಸ್ಟರ್ ಮಾಡಿಕೊಡುವುದಾಗಿಯೂ ಭರವಸೆ ನೀಡಲಾಗಿದೆ.

ಕೇರಳ ಸಿಎಂ ಪಿಣರಾಯಿ ಮಾತಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು

ಸದ್ಯ ಕೋಗಿಲು ಲೇಔಟ್ ತೆರವು ಪ್ರಕರಣ ಕರ್ನಾಟಕ ಮತ್ತು ಕೇರಳ ಸರ್ಕಾರದ ಮಧ್ಯೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಕೇರಳ ಸಿಎಂ ಪಿಣರಾಯಿ ಕರ್ನಾಟಕ ಸರ್ಕಾರವನ್ನು ಬುಲ್ಡೋಜರ್ ಸರ್ಕಾರ ಎಂದಿದ್ದರು. ಕೇರಳ ಸಿಎಂ ಪಿಣರಾಯಿ ಮಾತಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಈ ವಿಷಯದಲ್ಲಿ ಮೂಗು ತೂರಿಸಬೇಡಿ. ಈ ಮಧ್ಯೆ

ಕರ್ನಾಟಕ ಸರ್ಕಾರಕ್ಕೆ ವೇಣುಗೋಪಾಲ್ ಸಲಹೆ ನೀಡಿದ್ದರು. ವೇಣುಗೋಪಾಲ್ ಸಲಹೆ ನೀಡುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ.

ಸರ್ಕಾರದ ವಿರುದ್ಧ ಸಿ.ಟಿ.ರವಿ ಕಿಡಿ

ಇನ್ನು ಈ ವಿಚಾರವಾಗಿ ಬಿಜೆಪಿ MLC ಸಿ.ಟಿ.ರವಿ ಮಾತನಾಡಿದ್ದು, ಕೇರಳ ಸಂಸದ ಇಲ್ಲಿ ಬಂದು ನಮಗೆ ಪಾಠ ಹೇಳುವ ಅಗತ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಕನ್ನಡಿಗರ, ಕನ್ನಡದ ಹಿತಾಸಕ್ತಿ ಒತ್ತೆ ಇಡಬೇಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೋಗಿಲು ಲೇಔಟ್ನಲ್ಲಿ ಅಕ್ರಮ ಮನೆಗಳ ತೆರವಾಗಿದೆ. ಈಗ ಯಾಕೆ ನೀವು ಆ ಅಕ್ರಮವನ್ನು ಸಮರ್ಥಿಸುತ್ತಿದ್ದೀರಿ? ಅಕ್ರಮ‌ ಅಂದ್ಮೇಲೆ ಅದನ್ನ ಸಮರ್ಥನೆ ಮಾಡುವ ಅಗತ್ಯವಿಲ್ಲ. ಅಕ್ರಮ ಯಾರು ಮಾಡಿದರೂ ಅಕ್ರಮವೇ. ಸಿಎಂ ಹಾಗೂ ಡಿಸಿಎಂ ಕನ್ನಡ, ಕರ್ನಾಟಕವನ್ನು ಕಡೆಗಣಿಸಿ, ರಾಜಕಾರಣ ಮಾಡಿದರೆ ಕರ್ನಾಟಕದ ಜನರು ಕ್ಷಮಿಸಲ್ಲ. ನಿಮ್ಮ ರಾಜಕೀಯಕ್ಕೆ ರಾಜ್ಯದ ಸ್ವಾಭಿಮಾನ ಒತ್ತೆ ಇಡಬೇಡಿ ಎಂದು ವಾಗ್ದಾಳಿ ಮಾಡಿದ್ದಾರೆ.

Leave a Comment