ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು

Coastal Bulletin
ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು

ಕನ್ನಡ ಮತ್ತು ತಮಿಳಿನ ಹಲವು ಧಾರಾವಾಹಿಗಳಲ್ಲಿ ನಟಿಸಿ ಸೈನಿಸಿಕೊಂಡಿದ್ದ ಕಿರುತೆರೆ ನಟಿ ನಂದಿನಿ (CM Nandini) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಆರ್‌ಆರ್‌ ನಗರದಲ್ಲಿ ನಡೆದಿದೆ.

ಮೂಲತಃ ಕೊಟ್ಟೂರಿನವರಾದ ನಂದಿನಿ ಸಿ.ಎಂ ಅವರು ಬೆಂಗಳೂರಿನಲ್ಲಿ ವಾಸವಿದ್ದರು. ಕನ್ನಡದ ʻಜೀವ ಹೂವಾಗಿದೆʼ, ʻಸಂಘರ್ಷʼ, ʻಮಧುಮಗಳುʼ, ʻನೀನಾದೆ ನಾʼ ಧಾರಾವಾಹಿಗಳಲ್ಲಿ ಅವರು ಪೋಷಕ ಪಾತ್ರಗಳಲ್ಲಿ ನಟಿಸಿ

ಸೈ ಎನಿಸಿಕೊಂಡಿದ್ದರು.

ಅಷ್ಟೇ ಅಲ್ಲ ತಮಿಳು ಧಾರಾವಾಹಿಯಲ್ಲೂ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದರು. ತಮಿಳಿನ ʻಗೌರಿʼ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ʻಕನಕʼ ಹಾಗೂ ʻದುರ್ಗಾʼ ಎನ್ನುವ ದ್ವಿಪಾತ್ರದಲ್ಲಿ ಅವರು ನಟಿಸುತ್ತಿದ್ದರು.

Leave a Comment