ಹುಲಿಯ ಹಲ್ಲು ಧರಿಸಿದ ಪ್ರಕರಣ - ನಟ ದರ್ಶನ್ ಮನೆಗೆ ಅರಣ್ಯಾಧಿಕಾರಿಗಳ ಭೇಟಿ,ಪರಿಶೀಲನೆ. ಹಲವು ಸಿನೇಮಾ ನಟರಿಗೆ ನಡುಕ ಶುರು!

Coastal Bulletin
ಹುಲಿಯ ಹಲ್ಲು ಧರಿಸಿದ ಪ್ರಕರಣ - ನಟ ದರ್ಶನ್ ಮನೆಗೆ ಅರಣ್ಯಾಧಿಕಾರಿಗಳ ಭೇಟಿ,ಪರಿಶೀಲನೆ. ಹಲವು ಸಿನೇಮಾ ನಟರಿಗೆ ನಡುಕ ಶುರು!

ಬೆಂಗಳೂರು: ವರ್ತೂರು ಸಂತೋಷ್ ಅವರ ಬಂಧನದ ಬಳಿಕ ನಟ ದರ್ಶನ್ ಅವರು ಹುಲಿ ಉಗುರು ಧರಿಸಿದ್ದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅವರ ವಿರುದ್ಧ ದೂರು ಕೂಡ ದಾಖಲಾಗಿತ್ತು. ಇಂದು ಅರಣ್ಯಾಧಿಕಾರಿಗಳು ದರ್ಶನ್ ಮನೆಯನ್ನು ಪರಿಶೀಲಿಸಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇರುವ ದರ್ಶನ್ ಅವರ ನಿವಾಸದಲ್ಲಿ ಅರಣ್ಯಾಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.

ದರ್ಶನ್ ಬಳಿ ಇರುವುದು ನಿಜವಾದ ಹುಲಿ ಉಗುರು ಹೌದೋ ಅಥವಾ ಅಲ್ಲವೋ ಎಂಬುದು ಗೊತ್ತಾಗಬೇಕಿದೆ. ಒಂದು ವೇಳೆ ಹುಲಿ ಉಗುರು ಇರುವುದು ಖಚಿತವಾದರೆ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಸೋಶಿಯಲ್ ಮೀಡಿಯಾದಲ್ಲಿ ದರ್ಶನ್, ರಾಕಲೈನ್  ವೆಂಕಟೇಶ್,

ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಅವರ ಫೋಟೋಗಳು ವೈರಲ್ ಆಗಿವೆ. ಈ ಸೆಲೆಬ್ರಿಟಿಗಳು ಹುಲಿ ಉಗುರು ಧರಿಸಿದ್ದಾರೆ ಎಂಬ ಆರೋಪ ಎದುರಾಗಿದೆ. ವೈರಲ್ ಆಗಿರುವ ಫೋಟೋದ ಆಧಾರದ ಮೇಲೆ ದೂರು ನೀಡಲಾಗಿತ್ತು. ಅದರ ಅನ್ವಯ ಅರಣ್ಯಾಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.

Leave a Comment