Coastal Bulletin

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ ಪಕ್ಷ ಕಹಳೆ ಮೊಳಗಿಸಿದ್ದು, ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯುಗಾದಿ ಹಬ್ಬ, ಅಮಾವಾಸ್ಯೆ ಹೊಸತೊಡಕು ಸೇರಿದಂತೆ ಎಲ್ಲಾ ಲೆಕ್ಕಾಚಾರಗಳನ್ನು ಹಾಕಿ ಇಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ ಮಾಡಲಿದ್ದಾರೆ. ಅದ್ರೆ ಕೋಲಾರ ಕ್ಷೇತ್ರ ಅಭ್ಯರ್ಥಿಯ ಹೆಸರನ್ನು ಬಿಡುಗಡೆಗೊಳಿಸಿಲ್ಲ.

ಚಿಕ್ಕೋಡಿ-ಸದಲಗ: ಗಣೇಶ್ ಹುಕ್ಕೇರಿ,ಕಾಗವಾಡ: ಭರಮಗೌಡ ಎ. ಕಗೆ,ಕುಡಚಿ: ಮಹೇಂದ್ರ ಕೆ ತಮ್ಮನ್ನವರ್,ಹುಕ್ಕೇರಿ: ಎಬಿ ಪಾಟೀಲ್,ಯಮಕನಕರಡಿ: ಸತೀಶ್ ಜಾರಕಿಹೊಳಿ,ಬೆಳಗಾವಿ

ಗ್ರಾಮೀಣ: ಲಕ್ಷ್ಮಿ ಹೆಬ್ಬಾಳ್ಕರ್, : ಡಾ.ಅಂಜಲಿ ನಿಂಬಾಳ್ಕರ್,ಬೈಲಹೊಂಗಲ: ಮಹಾಂತೇಶ್ ಶಿವಾನಂದ ಕೌಜಲಗಿ,ರಾಮದುರ್ಗ: ಅಶೋಕ್ ಎಂ ಪಟ್ಟಣ,ಕಾಪು ಕ್ಷೇತ್ರಕ್ಕೆ ವಿನಯ್‌ ಕುಮಾರ್‌ ಸೊರಕೆ,ಕುಂದಾಪುರ ಕ್ಷೇತ್ರಕ್ಕೆ ಎಂ.ದಿನೇಶ್‌ ಹೆಗ್ಡೆ,ಬೈಂದೂರು ಕ್ಷೇತ್ರದಿಂದ ಗೋಪಾಲ್‌ ಪೂಜಾರಿ ಅವರಿಗೆ ಟಿಕೆಟ್‌ ನೀಡಲಾಗಿದೆ.

Leave a Comment