ಬೆಂಗಳೂರು: ಮಂಗಳೂರಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಹೊತ್ತಿದೆ. ಮಾತ್ರವಲ್ಲ ನಮ್ಮ ಟಾರ್ಗೆಟ್ ಹಿಂದೂ ದೇಗುಲಗಳು ಎಂದಿದೆ.
ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಹೆಸರಲ್ಲಿ ಬರೆಯಲಾಗಿರುವ ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಮೇಲ್ಭಾಗದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಶಂಕಿತ ಉಗ್ರ ಶಾರಿಖ್ ಫೋಟೋಗಳನ್ನ ಮುದ್ರಿಸಲಾಗಿದೆ. ಆ ಪೋಸ್ಟ್ ಪ್ರಕಾರ ಅಸಲಿಗೆ ಸ್ಫೋಟದ ಪ್ಲಾನ್ ಇದ್ದಿದ್ದು ಪಂಪ್ ವೆಲ್ನಲ್ಲಿ ಅಲ್ಲ. ಉಗ್ರ ಸಂಘಟನೆಯ ಟಾರ್ಗೆಟ್ ಇದ್ದಿದ್ದು, ಕದ್ರಿ ದೇವಸ್ಥಾನ ಎಂಬುದು ಗೊತ್ತಾಗಿದೆ. ಹೀಗೊಂದು ಪೋಸ್ಟ್ ಹಾಕಿರುವ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್, ಕೇಸರಿ ಉಗ್ರರನ್ನ ಗುರಿಯಾಗಿಸಿಕೊಂಡು ನಮ್ಮ ಸಹೋದರ ಮೊಹ್ಮದ್ ಶಾರಿಖ್ ಕದ್ರಿಯಲ್ಲಿರುವ ಹಿಂದೂ ದೇಗುಲದ ಮೇಲೆ ಅಟ್ಯಾಕ್ ಮಾಡಲು ಪ್ರಯತ್ನಿಸಿದ್ದ. ಆದರೆ ಅದರ ಉದ್ದೇಶಗಳು ಪೂರೈಸದಿದ್ದರೂ ನಾವು
ವ್ಯಾಪಾರ ಮತ್ತು ತಂತ್ರಗಳ ದೃಷ್ಟಿಕೋನದಿಂದ ಯಶಸ್ವಿಯಾಗಿದ್ದೇವೆ. ಸಹೋದರನ ಬಂಧನದಿಂದ ಸಂತೋಷಪಡುತ್ತಿರೋರಿಗೆ ಅದರಲ್ಲೂ ವಿಶೇಷವಾಗಿ ಎಡಿಜಿಪಿ ಅಲೋಕ್ ಕುಮಾರ್ ಅವರಂತಹವರು. ನಿಮ್ಮ ಸಂತೋಷವು ಅಲ್ಪಕಾಲಿಕವಾಗಿರುತ್ತದೆ. ನಿಮ್ಮ ದಬ್ಬಾಳಿಕೆ ಫಲವನ್ನ ನೀವು ಶೀಘ್ರದಲ್ಲೇ ಅನುಭವಿಸುತ್ತೀರಿ. ನೀವು ನಮ್ಮ ಟಾರ್ಗೆಟ್ ಲಿಸ್ಟ್ನಲ್ಲಿದ್ದೀರಿ ಎಂದು ಪೋಸ್ಟ್ ಮಾಡಲಾಗಿದೆ.
ನಾವು ನಿಮ್ಮ ಬಳಿಗೆ ಬರುತ್ತೇವೆ. ಯಾಕೆ ದಾಳಿ ಮಾಡಿದ್ದೀರಿ ಎಂದು ಕೇಳೋರಿಗೆ ಉತ್ತರಿಸ್ತೇವೆ. ನಮ್ಮ ಮೇಲೆ ನೀವು ಮುಕ್ತ ಸಮರ ಘೋಷಿಸಿರೋದ್ರಿಂದ ನಾವು ಪ್ರತೀಕಾರ ತೀರಿಸಿಕೊಳ್ತಿದ್ದೇವೆ. ನಮ್ಮ ಅಮಾಯಕರು ಜೈಲುಗಳಲ್ಲಿ ಕೊಳೆಯುತ್ತಿರುವ ಕಾರಣ ನಾವು ಪ್ರತೀಕಾರ ತೀರಿಸಿಕೊಳ್ತಿದ್ದೇವೆ. ಸಾರ್ವಜನಿಕ ಸ್ಥಳಗಳು ನಮ್ಮ ನರಮೇಧದ ಕರೆಗೆ ಸಾಕ್ಷಿಯಾಗುತ್ತವೆ ಎಂದು ಪೋಸ್ಟ್ ಮಾಡಲಾಗಿದೆ.















