Coastal Bulletin

ಚೆನ್ನೈ: ಹಿರಿಯ ನಟ ಮತ್ತು ಮಕ್ಕಳ್​ ನೀದಿ ಮೈಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ಹೈದರಾಬಾದ್​ಗೆ ತೆರಳಿದ್ದ ಕಮಲ್ ಹಾಸನ್ ಸಂಜೆಯ ವೇಳೆಗೆ ಚೆನ್ನೈಗೆ ವಾಪಸ್​ ಆಗಿದ್ದರು. ಈ ಸಂದರ್ಭದಲ್ಲಿ ಸ್ವಲ್ಪ ಶೀತ ಮತ್ತು ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಸಲಹೆಯಂತೆ ಇಂದು ಮಧ್ಯಾಹ್ನ ಡಿಸ್ಚಾರ್ಜ್​ ಆಗುವ ಸಾಧ್ಯತೆಯಿದೆ.

ಕಮಲ್ ಹಾಸನ್ ವೃತ್ತಿ ಜೀವನದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಶಂಕರ್ ನಿರ್ದೇಶನದ ಇಂಡಿಯಾ 2 ಸಿನಿಮಾ, ಬಿಗ್ ಬಾಸ್ ತಮಿಳು ರಿಯಾಲಿಟಿ ಶೋ ನಿರೂಪಣೆ ಮತ್ತು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಶಂಕರ್ ಮತ್ತು ಲೂಕಾ ಪ್ರೊಡಕ್ಷನ್ ನಡುವೆ ಕಾನೂನು ಹೋರಾಟಗಳಿಂದಾಗಿ ಇಂಡಿಯನ್ 2 ಹಲವಾರು ವಿವಾದಗಳಲ್ಲಿ ಮುಳುಗಿದೆ ಜೊತೆಗೆ ಸೆಟ್‌ನಲ್ಲಿ ನಡೆದಿರುವ ಅವಘಡದಿಂದ ಚಿತ್ರೀಕರಣ ಸ್ಥಗಿತಗೊಂಡಿದ್ದು ಕೆಲವು ದಿನಗಳ ಹಿಂದೆ ಚಿತ್ರೀಕರಣ ಶುರು ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ

ಖ್ಯಾತ ನಿರ್ದೇಶಕರಾದ ಕೆ ವಿಶ್ವನಾಥ್‌ ಅವರನ್ನು ಕಮಲ್ ಹಾಸನ್ ನಿವಾಸದಲ್ಲಿ ಭೇಟಿ ಮಾಡಿದ್ದರು. ಇನ್‌ಸ್ಟಾಗ್ರಾಂನಲ್ಲಿ 'ಮಾಸ್ಟರ್ ನಿರ್ದೇಶಕ ಕೆ ವಿಶ್ವನಾಥ್‌ ಸರ್‌ ಅವರನ್ನು ನಿವಾಸದಲ್ಲಿ ಭೇಟಿ ಮಾಡಿರುವೆ.  ತುಂಬಾ ಹಳೆ ನೆನಪುಗಳು..ಗೌರವ ಹೆಚ್ಚಾಗಿದೆ' ಎಂದು ಕಮಲ್ ಹಾಸನ್ ಬರೆದುಕೊಂಡಿದ್ದರು. 

ಹುಟ್ಟುಹಬ್ಬದ ದಿನ ಕಮಲ್ ಹಾಸನ್ ಮಣಿ ರತ್ನಂ ಜೊತೆ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದರು. 1987ರಲ್ಲಿ ನಾಯಕ ಸಿನಿಮಾದಲ್ಲಿ ಮಣಿರತ್ನಂ ಮತ್ತು ಕಮಲ್ ಒಟ್ಟಿಗೆ ಕೆಲಸ ಮಾಡಿದ್ದರು. '35 ವರ್ಷಗಳ ಹಿಂದೆ ನಾನು ಮಣಿರತ್ನಂ ಜೊತೆ ಕೆಲಸ ಮಾಡಲು ಎಷ್ಟು ಖುಷಿ ಇತ್ತು ಅಷ್ಟೇ ಖುಷಿ ಈಗಲೂ ಇದೆ. ಒಂದೇ ಮೈಂಡ್‌ಸೆಟ್‌ ಇರುವವರ ಜೊತೆ ಕೆಲಸ ಮಾಡುವುದಕ್ಕೆ ಸಂತೋಷವಿದೆ. ಈ ಚಿತ್ರದಲ್ಲಿ ರೆಹೆಮಾನ್‌ ಕೂಡ ಕೈ ಜೋಡಿಸಲಿದ್ದಾರೆ'ಎಂದು ಬರೆದುಕೊಂಡಿದ್ದರು.

Leave a Comment