Coastal Bulletin

ಮಂಗಳೂರು : ಜಿಲ್ಲೆಯ ಪ್ರಸಿದ್ಧ ದೈವದ ಮಧ್ಯಸ್ಥ ಹರೀಶ್ ಮೂಲ್ಯ(68) ನ.22 ರಂದು ನಿಧನರಾಗಿದ್ದಾರೆ.

ಇವರು ಬಜ್ಪೆ ಕಳವಾರಿನವರಾಗಿದ್ದು ಪತ್ನಿ ಇಬ್ಬರು ಪುತ್ರಿಯರು ಒಬ್ಬ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಹರೀಶ್ ಮೂಲ್ಯ ಕಳವಾರ್ ಅವರು ದೈವದ ಆರಾಧಕರಾಗಿ , ಮಧ್ಯಸ್ಥರಾಗಿ, ಕುಲಾಲ ಪ್ರತಿಷ್ಠಾನ ಮಂಗಳೂರು ಇದರ ಟ್ರಸ್ಟಿಯಾಗಿ ಹಲವು ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದರು.

ಇವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ  ಸಂಘದ ಅಧ್ಯಕ್ಷ ಮಯೂರ್ ಉಲ್ಲಾಳ್. ಕುಲಾಲ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್

ಕುಲಾಲ್ ಮಂಗಳದೇವಿ, ಶ್ರೀ ರಾಮಾಂಜನೇಯ ತಾಲಿಂ ಮತ್ತು ವ್ಯಾಯಾಮ ಶಾಲೆಯ ಸಂಸ್ಥಾಪಕ ಬಿ  ಸೀತಾರಾಮ ಕುಲಾಲ್, ಶ್ರೀ ವೀರನಾರಾಯಣ ದೇವಸ್ಥಾನ ಸೇವಾ ಟ್ರಸ್ಟಿನ ಅಧ್ಯಕ್ಷ ಬಿ . ಪ್ರೇಮಾನಂದ ಕುಲಾಲ್ , ಮುಂಬೈ  ಕುಲಾಲ ಸಂಘದ ಅಧ್ಯಕ್ಷ  ದೇವದಾಸ್ ಎಲ್ ಕುಲಾಲ್, ಕುಲಾಲ ಪ್ರತಿಷ್ಠಾನದ ಟ್ರಸ್ಟಿ ಬಿ  ನಾಗೇಶ್ ಕುಲಾಲ್ ಶಕ್ತಿನಗರ, ಮುಂಬೈ  ಪತ್ರಕರ್ತ ದಿನೇಶ್ ಕುಲಾಲ್. ದುಃಖ ಸಂತಾಪ  ಸೂಚಿಸಿದ್ದಾರೆ.

Leave a Comment