ಸಿನಿ ಪ್ರಿಯರಿಗೆ ಸಿಹಿಸುದ್ದಿ ಟಾಕೀಸ್ ಹೌಸ್ ಫುಲ್ ಗೆ ಗ್ರೀನ್ ಸಿಗ್ನಲ್- ಹೈಸ್ಕೂಲ್ ವಿದ್ಯಾರ್ಥಿಗಳಿಗೂ 100% ಹಾಜರಾತಿಗೆ ಅವಕಾಶ!

Coastal Bulletin
ಸಿನಿ ಪ್ರಿಯರಿಗೆ ಸಿಹಿಸುದ್ದಿ ಟಾಕೀಸ್ ಹೌಸ್ ಫುಲ್ ಗೆ ಗ್ರೀನ್ ಸಿಗ್ನಲ್- ಹೈಸ್ಕೂಲ್ ವಿದ್ಯಾರ್ಥಿಗಳಿಗೂ 100% ಹಾಜರಾತಿಗೆ ಅವಕಾಶ!

ಬೆಂಗಳೂರು : ದಸರಾ ಹಬ್ಬಕ್ಕೆ ಮುಂಚಿತವಾಗಿ ಅಕ್ಟೋಬರ್ 1 ರಿಂದ ಚಲನಚಿತ್ರ ವೀಕ್ಷಕರ ಲಸಿಕೆ ಪರಿಶೀಲಿಸಿ ಚಿತ್ರಮಂದಿರಗಳನ್ನು ಪೂರ್ಣ ಸಾಮರ್ಥ್ಯಕ್ಕೆ ತೆರೆಯಲು ರಾಜ್ಯ ಸರ್ಕಾರದ ಅನುಮತಿ ನೀಡಿದೆ.ಪಾಸಿಟಿವಿಟಿ ರೇಟ್ ಶೇ.1ಕ್ಕಿಂತ ಕಡಿಮೆ ಇದ್ರೆ ಮಾತ್ರ ಚಿತ್ರಮಂದಿರ ಓಪನ್ ಎಂದು ಸರಕಾರ ಉಲ್ಲೇಖಿಸಿದೆ.

6 ರಿಂದ 12 ನೇ ತರಗತಿಯ ಮಕ್ಕಳಿಗೆ ಶೇಕಡ 100 ರಷ್ಟು ಹಾಜರಾತಿಯೊಂದಿಗೆ ಭೌತಿಕ ತರಗತಿ ನಡೆಸಲು ಅವಕಾಶ ನೀಡಲಾಗಿದೆ.

ಅಕ್ಟೋಬರ್ 3 ರಿಂದ ಪಬ್ ತೆರೆಯಬಹುದಾಗಿದ್ದು, ಸಿಬ್ಬಂದಿಗೆ ಲಸಿಕೆ ಪಡೆಯುವುದು ಕಡ್ಡಾಯವಾಗಿದೆ.

Leave a Comment