ಮೇಕೆದಾಟು ನೀರಿನ ವಿಚಾರವಾಗಿ ಹೋರಾಡಿದವರು ಕಾವೇರಿಗಾಗಿ ಏಕೆ ಹೋರಾಡುತ್ತಿಲ್ಲ -ಯುವಮೋರ್ಚಾ ಮುಖಂಡ ಡಿ ಲೋಹಿತ್ ಪ್ರಶ್ನೆ.

Coastal Bulletin
ಮೇಕೆದಾಟು ನೀರಿನ ವಿಚಾರವಾಗಿ ಹೋರಾಡಿದವರು ಕಾವೇರಿಗಾಗಿ ಏಕೆ ಹೋರಾಡುತ್ತಿಲ್ಲ -ಯುವಮೋರ್ಚಾ ಮುಖಂಡ ಡಿ ಲೋಹಿತ್ ಪ್ರಶ್ನೆ.

ಮೈಸೂರು : ಕೋಟ್ಯಾಂತರ ರೂಪಾಯಿಗಳಷ್ಟು ಖರ್ಚು ವೆಚ್ಚ ಮಾಡಿ ರಾಜಕೀಯ ಅಧಿಕಾರಕ್ಕಾಗಿ ಮೇಕೆದಾಟು ಹೆಸರಿನಲ್ಲಿ ಹೋರಾಡಿದ ಕಾಂಗ್ರೆಸ್ ಪಕ್ಷ ತನ್ನ ದ್ವಂದ್ವ ನಿಲುವು ವ್ಯಕ್ತಪಡಿಸಿದೆ. ಇದೀಗ ಬೆಂಗಳೂರು, ಮೈಸೂರು, ಮಂಡ್ಯ ಇನ್ನು ಅನೇಕ ಜಿಲ್ಲೆಗಳಿಗೆ ಕುಡಿಯಲು ಹಾಗು ವ್ಯವಸಾಯಕ್ಕೆ ಉಪಯೋಗಿಸುವ ಕಾವೇರಿ ನೀರು ತಮಿಳುನಾಡಿನ ಪಾಲಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಹೋರಾಟ ಮಾಡುವುದಾಗಲಿ, ಯಾವುದೇ ತರಹದ ಕಾವೇರಿ ವಿಚಾರವಾಗಿ ಕಿಂಚಿತ್ತು ಅಭಿಮಾನವಿಲ್ಲ. ರೈತರು ಇಷ್ಟೊಂದು ಪ್ರತಿಭಟನೆ ಮಾಡಿದರೂ ಸರಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಮೈಸೂರು ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ.ಲೋಹಿತ್ ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರದ ಆಸೆಗಾಗಿ ಅಂದು ಹೋರಾಡಿ ಅಧಿಕಾರ ಬಂದಾಗ ಏನು ಗೊತ್ತಿಲ್ಲದ ಹಾಗೆ ಕುಳಿತರೆ ರಾಜ್ಯದ ಜನತೆಯ ಹಾಗೂ ರೈತರ ಪರಿಸ್ಥಿತಿ ಏನಾಗಬಹುದು ಎಂದು  ಸರ್ಕಾರ ಯೋಚಿಸಬೇಕಾಗಿದೆ , ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರಿಗೆ ಪರಿಹಾರ ದೊರಕಿಸಿಕೊಡಬೇಕಾಗಿದೆ.

data-filename="IMG-20230923-WA0041.jpg" style="width: 292px;">

ಕಾವೇರಿ ನೀರು ಪ್ರತಿಯೊಬ್ಬರಿಗೂ ಅವಶ್ಯಕತೆ ಇದೆ ಆದ್ದರಿಂದ ನೀರನ್ನು ಕರ್ನಾಟಕದ ಜನತೆಗೆ ಬಳಸಲು ಮುಂದಾಗಿ ಇಲ್ಲವಾದರೆ ರಾಜ್ಯಾದಂತ ಪ್ರತಿಭಟನೆ,ಹೋರಾಟಗಳು ಜೋರಾಗಿ ಹೊತ್ತಿ ಉರಿಯುವುದು ಶತಸಿದ್ಧ ನಿಮ್ಮ ಸರ್ಕಾರ ಬೀಳುವುದು ಅಷ್ಟೇ ಸತ್ಯ ಎಂದು ಸರಕಾರಕ್ಕೆ ಛಾಟಿ ಬೀಸಿದರು.

Leave a Comment