Coastal Bulletin

ಮೈಸೂರು : ದೇವನೂರು ಪೀಠಾಧ್ಯಕ್ಷರಾದ ಪೂಜ್ಯಶ್ರೀ ನಿ ಪ್ರ ಸ್ವ ಮಹಂತ ಸ್ವಾಮಿಗಳವರ ದಿವ್ಯ ನೇತೃತ್ವದ ಶ್ರೀ ಗುರು ಮಲ್ಲೇಶ್ವರ ಹಳೆಮಠ ಸೇವಾ ಟ್ರಸ್ಟ್ (ರಿ) ಹಳೇ ಮಠ ದೇನೂರು ಪೋಸ್ಟ್ ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ ಇವರಿಂದ ನರಸೀಪುರ ಸರಗೂರು ಹೊಸಮಠದ ಆವರಣದಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿ ಅನೇಕ ಪಾತ್ರಗಳನ್ನು ಉತ್ತಮವಾಗಿ ಅಭಿನಯಿಸಿರುವ ಕಲಾವಿದರುಗಳಾದ ಕೆರೆಹಳ್ಳಿ ಡಿ ಲೋಹಿತ್ ಹೊಸಕೋಟೆಯ ಪ್ರಭು ಸ್ವಾಮಿ ಹಾಗೂ ಶಿವಮಲ್ಲಪ್ಪ ನವರಿಗೆ ನಿರಂಜನ ಶ್ರೀ ಪ್ರಶಸ್ತಿ ನೀಡುವ ಮುಖಾಂತರ ಗೌರವಿಸಿದೆ.

ಈ ಕಾರ್ಯಕ್ರಮದಲ್ಲಿ ಹೊಸಮಠದ ಪೂಜ್ಯರಾದ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳವರು ಹಾಗೂ ಸಂಘದ ಅಧ್ಯಕ್ಷರಾದ ಪುಟ್ಟ ಬುದ್ದಿ ರವರು ಉಪಾಧ್ಯಕ್ಷರಾದ

ಪ್ರಭುಸ್ವಾಮಿ ಹಾಗೂ ಹೊನ್ನಪ್ಪ ಕಾರ್ಯದರ್ಶಿ, ಖಜಾಂಚಿ ಎಂ ನಾಗೇಂದ್ರ ವಮ್ಮ ಪ್ರಭುಸ್ವಾಮಿ ಹಾಗೂ ಧರ್ಮದರ್ಶಿಗಳು ಮುಂತಾದ ಸದಸ್ಯರುಗಳು ಉಪಸ್ಥಿತರಿದ್ದರು.

Leave a Comment