ಶ್ರೀ ವೀರಶೈವ ಲಿಂಗಾಯತ ಸಮಾನ ಮನಸ್ಕರ ಸ್ನೇಹ ಬಳಗ ಹಾಗೂ ಹೊಸಕೋಟೆ ಶ್ರೀ ಕಪಿಲೇಶ್ವರ ರೈತ ಸ್ವಸಹಾಯ ಸಂಘ ಇವರಿಂದ ವಿವಿಧ ಕಾರ್ಯಕ್ರಮಗಳು ಹಾಗೂ ಪ್ರಶಸ್ತಿ ಪ್ರದಾನ.

Coastal Bulletin
ಶ್ರೀ ವೀರಶೈವ ಲಿಂಗಾಯತ ಸಮಾನ ಮನಸ್ಕರ ಸ್ನೇಹ ಬಳಗ ಹಾಗೂ ಹೊಸಕೋಟೆ ಶ್ರೀ ಕಪಿಲೇಶ್ವರ ರೈತ ಸ್ವಸಹಾಯ ಸಂಘ ಇವರಿಂದ ವಿವಿಧ ಕಾರ್ಯಕ್ರಮಗಳು ಹಾಗೂ ಪ್ರಶಸ್ತಿ ಪ್ರದಾನ.

ಮೈಸೂರು : ಶ್ರೀ ವೀರಶೈವ ಲಿಂಗಾಯತ ಸಮಾನ ಮನಸ್ಕರ ಸ್ನೇಹ ಬಳಗ (ರಿ) ಕುದೇರು ಶಾಖ ಮಠ ಆಲನಹಳ್ಳಿ ಮೈಸೂರು ಇವರಿಂದ 68 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕುದೇರು ಶಾಖ ಮಠ ಆಲನಹಳ್ಳಿಯಲ್ಲಿ ರಸಮಂಜರಿ ಕಾರ್ಯಕ್ರಮ ಹಾಗೂ ಹಿರಿಯರಂಗಭೂಮಿ ಕಲಾವಿದರಾದ ಶ್ರೀ ಹೊಸಕೋಟೆ ಶಿವಮಲ್ಲಪ್ಪ ಅವರ ಕಲಾ ಸಾಧನೆಯ ಸಾಕ್ಷ ಚಿತ್ರ ಬಿಡುಗಡೆ ಮತ್ತು ಕಲಾಚತುರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹೊಸಕೋಟೆಯ ಶ್ರೀ ಕಪಿಲೇಶ್ವರ ರೈತ ಸ್ವಸಹಾಯ ಸಂಘ (ರಿ) ರವರಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವಂತಹ ಸಾಧಕರನ್ನು ಗುರುತಿಸಿ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾಜ ಸೇವ ರತ್ನ ಪ್ರಶಸ್ತಿ ಪುರಸ್ಕೃತರು. 

ಆರಕ್ಷಕ ಕ್ಷೇತ್ರ ಎಂ ಡಿ ಶಿವರಾಜರವರು, ರಂಗಭೂಮಿ ಕ್ಷೇತ್ರ ಬೀರಿಹುಂಡಿ ಗೋವಿಂದರಾಜು,ಕಲಾ ಕ್ಷೇತ್ರ,ಹರಿಕಥಾ ವಿದ್ವಾನ್  ಶಿವಕುಮಾರ ಶಾಸ್ತ್ರಿ,ಡಿ.ಮಧು ಮೈಸೂರು ,ಶಿಕ್ಷಣ ಕ್ಷೇತ್ರದಲ್ಲಿ ಎಸ್ ಧನಂಜಯ್,ಪ್ರಭುಸ್ವಾಮಿ ಹೊಸಕೋಟೆ ,ಕೃಷಿ ಕ್ಷೇತ್ರದಲ್ಲಿ,ಎಸ್ ಪ್ರಭುಸ್ವಾಮಿ ಚಿಕ್ಕ ಹೊಮ್ಮಾ,ಸಾಮಾಜಿಕ ಕ್ಷೇತ್ರ,ಎಸ್ ಬಾಲಕೃಷ್ಣ ಸಂಗಾಪುರ,ಮಹದೇವಸ್ವಾಮಿ ಲಲಿತಾದ್ರಿಪುರ ಹಾಗೂ ಚೆನ್ನಪ್ಪ ವಡೆಯನಪುರ, ಮಾಧ್ಯಮ ಕ್ಷೇತ್ರದಲ್ಲಿ ಎಚ್ಎಸ್ ತೋಂಟಧಾರಿಯಸ್ವಾಮಿ ಒರೆಯಾಲಾರವರನ್ನು ಗೌರವಿಸಿಲಾಯಿತು.

ಕಾರ್ಯಕ್ರಮದಲ್ಲಿ ಕುದೇರು ಶಾಖ ಮಠದ ಪರಮ ಪೂಜ್ಯ ಗುರುಶಾಂತ ಸ್ವಾಮಿಗಳವರು ಮಾತನಾಡಿ, ಸಾಧನೆ ಮಾಡಿರುವಂತ ಸಾಧಕರನ್ನು ಗುರುತಿಸುವುದು ಒಂದು ಸಾಧನೆಯೇ, ಅಪಾರವಾದ ಸಾಧನೆಯನ್ನು ಮಾಡಿರುವಂತಹ ಸಾಧಕರು ಮತ್ತಷ್ಟು ಸಮಾಜದಲ್ಲಿ ಸಾಧನೆ ಮಾಡಲು ಸಾಮಾಜಿಕವಾಗಿ ತಮ್ಮ ಕೊಡುಗೆಯನ್ನು ನೀಡಲು ಇದು

ಪ್ರೋತ್ಸಾಹದಾಯಕ ವಾದಂತಹ ಕೆಲಸ, ಅನೇಕ ಸಂಘ ಸಂಸ್ಥೆಗಳಿಗೆ ಈ ಕಾರ್ಯಕ್ರಮ ಮಾದರಿಯ ಕಾರ್ಯಕ್ರಮ, ಸಾಧಕರು ತಮ್ಮ ಸಾಧನೆ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಪ್ರತಿಯೊಬ್ಬರಿಗೂ ಇದರ ಬಗ್ಗೆ ಜಾಗೃತಿ ಮೂಡಿಸಿ ತಮ್ಮ ಸಾಧನೆಗಳು ವಿಶ್ವ ಮಟ್ಟಕ್ಕೆ  ಬೆಳೆಯಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ಕಪಿಲೇಶ್ವರ ರೈತ ಸ್ವಸಹಾಯ  ಸಂಘದ ಅಧ್ಯಕ್ಷ ಪ್ರಭುಸ್ವಾಮಿ ,ಲಯನ್ಸ್ ಜೀವಧಾರ ರಕ್ತ ನಿಧಿ ಕೇಂದ್ರದ ಅಧ್ಯಕ್ಷ ಗಿರೀಶ್, ನಿವೃತ್ತ ಪೊಲೀಸ್ ಅಧಿಕಾರಿ ಎಂ ಡಿ ಶಿವರಾಜು, ಗುರುಸ್ವಾಮಿ, ಕೆರೆಹಳ್ಳಿ ಬಿ  ದೊರೆಸ್ವಾಮಿ, ಬಸವಣ್ಣನವರು, ದೇವಪ್ಪಾಜಿ,  ಹಿರಿಯ ರಂಗಭೂಮಿ ಕಲಾವಿದರಾದ ಚಿಕ್ಕಳ್ಳಿ ಪುಟ್ಟಣ್ಣ, ಹೊಸಕೋಟೆ ನಂದೀಶ್, ಮುಳ್ಳೂರು ಪಾರ್ವತಪ್ಪ, ಪಿಡಿಒ ಸೋಮಶೇಖರ್, ಹರಿಕಥೆ ಕಲಾವಿದರಾದ ಭರತ್ ಶಿವಕುಮಾರ್ ಶಾಸ್ತ್ರಿ, ಸುರೇಶ್,ಮೂರ್ತಿ, ವೀರಗಾಸೆ ಕಲಾವಿದರಾದ ಅಂಬಳೆ ಶಿವಣ್ಣ, ಬಾಗಳಿ ಮಹೇಶ್, ಹೊಸಕೋಟೆ ರಮೇಶ್, ಸೋನಳ್ಳಿ ಶಿವಣ್ಣ,ಗುರು,ರಾಜಪ್ಪ, ಹಾಗೂ ಮುಂತಾದವರು ಉಪಸ್ಥಿತರಿದ್ದರು.

Leave a Comment