ದೇಶದ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ರವರ 72ನೇ ಜನ್ಮದಿನದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು 24 ಯುವಕರು ರಕ್ತದಾನ ಮಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೈಸೂರಿನ ಮಾಜಿ ಮಹಾಪೌರರಾದ ಶ್ರೀ ಸಂದೇಶ್ ಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿಯವರು ದೇಶ ಕಂಡ ಒಬ್ಬ ಅಪ್ರತೀಮ ಧಿಮಂತ ನಾಯಕ ಭಾರತ ಅವರ ನಾಯಕತ್ವದಲ್ಲಿ ಜಗತ್ತಿನ ಒಂದು ಬಲಿಷ್ಟ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ, ಅವರ ಹುಟ್ಟು ಹಬ್ಬದ ಪ್ರಯುಕ್ತ ಪಕ್ಷವು ವಿವಿಧ ಸಮಾಜ ಸೇವಾ ಕಾರ್ಯಗಳನ್ನು ರಾಜ್ಯಾದ್ಯಾಂತ ಹಮ್ಮಿಕೊಂಡಿದೆ ಇಡೀ ವಿಶ್ವವೇ ಇಂದು ಭಾರತಕಡೆಗೆ ತಿರುಗಿ ನೋಡುತ್ತಿದೆ ಎಂದರೆ ಅದಕ್ಕೆ ಮೋದಜಿ ಅವರು ನಡೆಸಿರುವ ಉತ್ತಮ ಆಡಳಿ ಕಾರ್ಯವೇ ಕಾರಣವಾಗಿ ಅಂತಹ ದೇವತಾ ಪುರುಷ ಮಹಾನ್ ವ್ಯಕ್ತಿಯ ಜನ್ಮದಿನದಂದು ಕ್ಷೇತ್ರದ ಯುವ ಮೋರ್ಚಾ ಕಾರ್ಯಕರ್ತರು ರಕ್ತದಾನ ಶಿಬಿರ ಆಯೋಜಿಸಿ ಯಶಸ್ವಿಗೆ ಮುಂದಾಗಿರುವದು ಸಂತಸ ಪಡುವಂತಾಗಿದೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ಇನ್ನಷ್ಟು ಗಟ್ಟಿಯಾಗಿ ನೆಲೆಯೂರಲಿ ಮೋದಿಜಿ ಅವರ ಕೊಡುಗೆ ದೇಶಕ್ಕೆ ಇನ್ನಷ್ಟು ಲಬಿಸಲಿ ಎಂದು ಆಶಿಸಿದರು.
ಮಾಜಿ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಶ್ರೀ ಬಿ ಪಿ ಮಂಜುನಾಥ್ ಅವರು ಮಾತನಾಡಿ ನಾಡು ಕಂಡ ಅಪ್ರತಿಮ ದೇಶ ಸೇವಕ ನಮ್ಮಲ್ಲರ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಜನ್ಮ ದಿನ ಎಲ್ಲರು ಖುಷಿ ಪಡುವಂತಹದ್ದಾಗಿದೆ ದೇಶ ಸೇವೆಯೇ
ನನ್ನ ಉಸಿರು ಎಂದು ತಿಳಿದು ದೇಶಕ್ಕಾಗಿ ದಿನದ 18 ಗಂಟೆಗಳ ಕಾಲ ಕೆಲಸ ಮಾಡುತ್ತಿರುವ ಮೋದಿಜಿ ಅವರು ನಮಗೆ ಸಿಕ್ಕಿರುವದು ನಮ್ಮೇಲ್ಲರ ಸುದೈವವಾಗಿದೆ ರಕ್ತದ ಕಣ ಕಣವನ್ನು ದಾನವನ್ನಾಗಿ ನೀಡುವದರೊಂದಿಗೆ ಅವರ ಮೇಲಿನ ಅಭಿಮಾನ ಪ್ರೀತಿಯನ್ನು ವ್ಯಕ್ತಪಡಿಸಿರುವ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಮೈಸೂರು ನಗರ ಉಪಾಧ್ಯಕ್ಷರಾದ ದಿನೇಶ್, ಟಿ ರಮೇಶ್, ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ ಲೋಹಿತ್, ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಸು ಮುರಳಿ ನಗರ ಯುವ ಮೋರ್ಚಾ ಉಪಾಧ್ಯಕ್ಷ ರಾದ ಕಾರ್ತಿಕ್ ಕುಮಾರ್,ಎಸ್ ಟಿ ಮೋರ್ಚಾ ಕ್ಷೇತ್ರದ ಅಧ್ಯಕ್ಷ ನಾರಾಯಣ ಲೋಲಪ್ಪ, ಹಿಂದುಳಿದ ವರ್ಗಗಳ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಮಣಿರತ್ನಂ, ಮೈಸೂರು ನಗರ ಕಾರ್ಯಕಾರಣಿ ಸದಸ್ಯರುಗಳಾದ ಶಿವಾನಂದರಾವ್, ಕೃಷ್ಣಮೂರ್ತಿ ಡಾನ್,ಮಾಜಿ ಎಸ್ ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಗಿರಿಧರ ,ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಧನರಾಜ್, ನವೀನ್ ಶೆಟ್ಟಿ,ವಾರ್ಡ್ ಅಧ್ಯಕ್ಷ ರಾದ ಕಿರಣ್, ಮುಖಂಡರುಗಳಾದ ಜೀವನ್, ಜಗದೀಶ್, ನಾಣಿ, ಬಸವರಾಜು ಸಂತೋಷ್ ಮಹಾದೇವ, ಸಂತೋಷ್, ಭವಾನಿ, ಶಿಲ್ಪಾ, ಆನಂದ್, ರವಿ, ರಾಜು, ಪ್ರಸಾದ್, ಮುಂತಾದವರು ಉಪಸ್ಥಿತರಿದ್ದರು.















