Coastal Bulletin

ತಿರುಪತಿ ದೇವಸ್ಥಾನಕ್ಕೆ ಚೆನ್ನೈನ ಉದ್ಯಮಿ ಅಬ್ದುಲ್‌ ಘನಿ ಮತ್ತು ನುಬೀನಾ ದಂಮಪತಿ ಬರೊಬ್ಬರಿ 1.02 ಕೋಟಿ ದೇಣಿಗೆ ನೀಡಿದ್ದಾರೆ.

ಪತ್ನಿ ನುಬೀನಾ ಬಾನು ಮತ್ತು ಮಕ್ಕಳೊಂದಿಗೆ ದೇವರ ದರ್ಶನ ಪಡೆದ ಘನಿ ಅವರು ತಿರುಪತಿ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ ಪೀಠೋಪಕರಣ ಹಾಗೂ ಪಾತ್ರೆಗಳನ್ನು ಖರೀದಿಸಲು 87 ಲಕ್ಷ ಹಾಗೂ ಎಸ್‌.ವಿ.ಅನ್ನಪ್ರಸಾದಂ ಟ್ರಸ್ಟ್‌ಗೆ 15 ಲಕ್ಷ ನೀಡಿದ್ದಾರೆ‌.

ತಿರುಪತಿ ತಿರುಮಲ ದೇವಾಲಯ ಸಮಿತಿಯ

ಅಧಿಕಾರಿ ಘನಿ ಕುಟುಂಬದವರು ಈ ಮೊತ್ತದ ಡಿ.ಡಿ ಹಸ್ತಾಂತರಿಸಿದರು.‌

ಕೋವಿಡ್ ಗೆ ಮೊದಲು ಕೂಡ ಅವರು ದೇವಸ್ಥಾನಕ್ಕೆ‌ ಲಕ್ಷಾಂತರ ಮೌಲ್ಯದ ಮೆಷಿನ್ ಗಳನ್ನು ಕೂಡ ನೀಡಿದ್ದರು.‌ಇದು ದೇವಾಲಯದ ಆವರಣದ ಸ್ವಚ್ಛತೆಗೆ ಬಳಕೆಯಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಘನಿ,ನಾನು ವೆಂಕಟೇಶ್ವರ ಸ್ವಾಮಿಯ ಭಕ್ತ.ಸುಮಾರು 25 ವರ್ಷಗಳಿಂದ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

Leave a Comment