ಸೌಜನ್ಯ ಕೊಲೆ ಕೇಸ್ ವ್ಯಾಪಕ ಚರ್ಚೆಗೆ ಕಾರಣವಾದ ಪರಮೇಶ್ವರ್ ಹೇಳಿಕೆ.ಮೌನಕ್ಕೆ ಜಾರಿದ ಬಿಜೆಪಿ ನಾಯಕರು.

Coastal Bulletin
ಸೌಜನ್ಯ ಕೊಲೆ ಕೇಸ್ ವ್ಯಾಪಕ ಚರ್ಚೆಗೆ ಕಾರಣವಾದ ಪರಮೇಶ್ವರ್ ಹೇಳಿಕೆ.ಮೌನಕ್ಕೆ ಜಾರಿದ ಬಿಜೆಪಿ ನಾಯಕರು.

ಧರ್ಮಸ್ಥಳ: 11 ವರ್ಷಗಳ ಹಿಂದೆ ಸಂಭವಿಸಿದ ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣವನ್ನು ಮರು ತನಿಖೆಗೊಳಪಡಿಸಲು ತೀವ್ರ ಹೋರಾಟ ನಡೆಯುತ್ತಿರುವಾಗಲೇ ಸರಕಾರ ಮರು ತನಿಖೆ ಅಸಾಧ್ಯ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಭಾರೀ ವಿರೋಧ ವ್ಯಕ್ತವಾಗಿದೆ.

ಈ ಕುರಿತು ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ, ಈ ಪ್ರಕರಣ ಕಾನೂನಾತ್ಮಕವಾಗಿ ಮುಗಿದು ಹೋಗಿದೆ. ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಸೌಜನ್ಯಾ ಹತ್ಯೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ವಿವಿಧ ವೇದಿಕೆಗಳಲ್ಲಿ ಹರಡುತ್ತಿರುವ ಎಲ್ಲ

ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ನಿಜವಾದ ಅಪರಾಧಿಗಳನ್ನು ಬಂಧಿಸಬೇಕೆನ್ನುವ ಭಾರೀ ಪ್ರತಿಭಟನೆಗಳು ಕರ್ನಾಟಕದಾದ್ಯಂತ ಈಗಾಗಲೇ ಪ್ರಾರಂಭವಾಗಿದ್ದು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ.

ಗೃಹ ಸಚಿವರ ಹೇಳಿಕೆ ಹಾಗೂ ಇದನ್ನು ವಿರೋಧ ವ್ಯಕ್ತಪಡಿಸದೇ ಸುಮ್ಮನಾಗಿರುವ ಬಿಜೆಪಿಯ ವಿರುದ್ಧವೂ ಭಾರೀ ಟೀಕೆಗಳು ವ್ಯಕ್ತವಾಗಿದೆ.

Leave a Comment