ಫರಂಗಿಪೇಟೆ: ಯಕ್ಷ ದ್ರುವ - ಯಕ್ಷ ಶಿಕ್ಷಣ ನಾಟ್ಯ ತರಬೇತಿ ತರಗತಿ ಉದ್ಘಾಟನೆ. ಎಲ್ಲಾ ಪ್ರಕಾರದ ಕಲೆಗಳ ಸಮ್ಮಿಲನವೇ ಯಕ್ಷಗಾನ: ಪಟ್ಲ ಸತೀಶ್ ಶೆಟ್ಟಿ.

Coastal Bulletin
ಫರಂಗಿಪೇಟೆ: ಯಕ್ಷ ದ್ರುವ - ಯಕ್ಷ ಶಿಕ್ಷಣ ನಾಟ್ಯ ತರಬೇತಿ ತರಗತಿ ಉದ್ಘಾಟನೆ. ಎಲ್ಲಾ ಪ್ರಕಾರದ ಕಲೆಗಳ ಸಮ್ಮಿಲನವೇ ಯಕ್ಷಗಾನ: ಪಟ್ಲ ಸತೀಶ್ ಶೆಟ್ಟಿ.

ಬಂಟ್ವಾಳ :ಯಕ್ಷಗಾನ ಒಂದು ಶ್ರೇಷ್ಠ ಕಲೆ, ಎಲ್ಲಾ ಪ್ರಕಾರದ ಕಲೆಗಳ ಸಮ್ಮಿಲನವೇ ಯಕ್ಷಗಾನ. ಇಂದು ಅದು ಜಾಗತಿಕ ಕಲೆಯಾಗಿ ಮೇಳೈಸುತ್ತಿದೆ ಎಂದು ಯಕ್ಷ ದ್ರುವ ಪಟ್ಲ ಫೌಂಡೇಷನ್ ನ ಸ್ಪಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಯವರು ಯಕ್ಷ ದ್ರುವ - ಯಕ್ಷ ಶಿಕ್ಷಣ ನಾಟ್ಯ ತರಬೇತಿ ಶಿಕ್ಷಣ ಅಭಿಯಾನದಡಿ ಶ್ರೀ ರಾಮ ಪ್ರೌಢ ಶಾಲೆ ಅರ್ಕುಳ ಫರಂಗಿಪೇಟೆಯಲ್ಲಿ ತರಗತಿ ಯನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀ ರಾಮ ಪ್ರೌಢ ಶಾಲೆ ಅರ್ಕುಳ ಫರಂಗಿಪೇಟೆಯ ನೂರಕ್ಕೂ ಮಿಕ್ಕಿ ಮಕ್ಕಳು ಈ ತರಗತಿಯಲ್ಲಿ ಭಾಗವಹಿಸಿದರು 

ವೇದಿಕೆಯಲ್ಲಿ ಶ್ರೀ ರಾಮ ವಿದ್ಯಾ ಸಂಸ್ಥೆ ಅರ್ಕುಳ ಫರಂಗಿಪೇಟೆಯ ಶಾಲಾಡಳಿತ ಮಂಡಳಿ ಅಧ್ಯಕ್ಷರಾದ ಅರ್ಕುಳ ಬೀಡು ವಜ್ರನಾಭ ಶೆಟ್ಟಿ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಎ ಕೆ ಜಯರಾಮ ಶೇಕ , ನಿವೃತ್ತ

ಮುಖ್ಯ ಶಿಕ್ಷಕರಾದ ದೇವದಾಸ್ ಕೆ ಆರ್ , ರೋಟರಿ ಕ್ಲಬ್ ಫರಂಗಿಪೇಟೆ ಯ ಕೋಶಾಧಿಕಾರಿ ದಿನೇಶ್ ಶೆಟ್ಟಿ ಕೊಟ್ಟಿಂಜ , ಯಕ್ಷ ದ್ರುವ - ಯಕ್ಷ ಶಿಕ್ಷಣದ ಶಿಕ್ಷಕರಾದ ಅನ್ವೇಶ್ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶೈಲಜಾ , ಪ್ರೌಢ ಶಾಲಾ ಮುಖ್ಯ ಶಿಕ್ಷಕ ಜಯ ಕುಮಾರ್ ಉಪಸ್ಥಿತರಿದ್ದರು

Leave a Comment