RSS, ಬಜರಂಗದಳ ವಿರುದ್ಧ ಟೀಕೆ: ಸಿದ್ದರಾಮಯ್ಯಗೆ ನೋಟಿಸ್ ನೀಡಿದ ಕೋರ್ಟ್!

Coastal Bulletin
RSS, ಬಜರಂಗದಳ ವಿರುದ್ಧ ಟೀಕೆ: ಸಿದ್ದರಾಮಯ್ಯಗೆ ನೋಟಿಸ್ ನೀಡಿದ ಕೋರ್ಟ್!

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಾ ಸಂಘ ಹಾಗೂ ಬಜರಂಗದಳ (RSS And bajarangadala) ವಿರುದ್ಧ ಸದನದಲ್ಲೇ ವಾಗ್ದಾಳಿ ನಡೆಸಿದ್ದ ಸಿಎಂ ಸಿದ್ದರಾಮಯ್ಯಗೆ (Siddaramaiah) ಇದೀಗ ಸಂಕಷ್ಟ ಎದುರಾಗಿದೆ. ಅತಿಹೆಚ್ಚು ಅಪರಾಧ ಕೃತ್ಯಗಳಾಗುತ್ತಿರುವುದೇ ಆರ್ ಎಸ್​​ ಎಸ್​ ಮತ್ತು ಬಜರಂಗದಳದಿಂದ ಸಿಎಂ ಸಿದ್ದರಾಮಯ್ಯ ಸದನದಲ್ಲೇ ಬಹಿರಂಗವಾಗಿ ಟೀಕಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯವು (Bengaluru 42th ACJM Court) ಸಿಎಂ ಸಿದ್ದರಾಮಯ್ಯನವರಿಗೆ ನೋಟಿಸ್ ಜಾಡಿ ಮಾಡಿದ್ದು, ಜೂನ್ 26ರೊಳಗೆ ಕೋರ್ಟ್ ನೋಟಿಸ್​ ಗೆ ಉತ್ತರಿಸಬೇಕಿದೆ.

ಅತಿಹೆಚ್ಚು ಅಪರಾಧ ಕೃತ್ಯಗಳಾಗುತ್ತಿರುವುದೇ RSS, ಬಜರಂಗದಳದಿಂದ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲೇ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸದನದಲ್ಲಿ ಅಲ್ಲೋಲ ಕಲ್ಲೋಲವೇ ಆಗಿತ್ತು. ಬಿಜೆಪಿ ಶಾಸಕರು ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಖಂಡಿಸಿ ವಾಗ್ದಾಳಿ ನಡೆಸಿದ್ದರು.

ಅಲ್ಲದೇ ಜನರ ಭಾವನೆಗಳಿಗೆ ಧಕ್ಕೆ ಆರೋಪದಡಿ ಕಿರಣ್ ಎನ್ನುವರು

ಸಿದ್ದರಾಮಯ್ಯ ವಿರುದ್ಧ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದರು. ಆದ್ರೆ, ಕೋರ್ಟ್, ಈ ಕೇಸ್ ದಾಖಲಿಸಿಕೊಳ್ಳುವ ಮುನ್ನ ಸಿಎಂ ಸಿದ್ದರಾಮಯ್ಯನವರ ವಾದ ಆಲಿಸಲು ಕೋರ್ಟ್ ಅವಕಾಶ ನೀಡಿದೆ. ಹೀಗಾಗಿ ಬಿಎನ್ ಎಸ್ಎಸ್ ಸೆಕ್ಷನ್ 223 ಅಡಿಯಲ್ಲಿ ಸಿದ್ದರಾಮಯ್ಯಗೆ ನೋಟಿಸ್ ನೀಡಿದ್ದು, ಜೂನ್ 26ರೊಳಗೆ ಕೋರ್ಟ್ ನೋಟಿಸ್ ಗೆ ಉತ್ತರಿಸಬೇಕಿದೆ.

Leave a Comment