ಕಾಸರಗೋಡು: ಕೆರೆಯಲ್ಲಿ ಮುಳುಗಿ ಬೆಂಗಳೂರಿನ ಯುವಕ ಮೃತ್ಯು

Coastal Bulletin
ಕಾಸರಗೋಡು: ಕೆರೆಯಲ್ಲಿ ಮುಳುಗಿ ಬೆಂಗಳೂರಿನ ಯುವಕ ಮೃತ್ಯು

ಕಾಸರಗೋಡು: ಕೆರೆಯಲ್ಲಿ ಮುಳುಗಿ ಬೆಂಗಳೂರಿನ ಯುವಕನೋರ್ವ ಮೃತಪಟ್ಟ ಘಟನೆ ಬುಧವಾರ ನಗರದ ತಳಂಗರೆಯಲ್ಲಿ ನಡೆದಿದೆ.

ಬೆಂಗಳೂರು ಡಿ.ಜೆ ಹಳ್ಳಿಯ ಫೈಝಾನ್(22) ಮೃತಪಟ್ಟಯುವಕ. ಸಹೋದರ ಸನ್ (20) ನನ್ನು ಗಂಭೀರ ಸ್ಥಿತಿಯಲ್ಲಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ತಳಂಗರೆ ಯ ಮಾಲಿಕ್ ದಿನಾರ್ ಮಸೀದಿಗೆ ಆಗಮಿಸಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

ಸಮೀಪದ ಕೆರೆಗೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಸ ಕ್ಲೀನ್ ನನ್ನು ರಕ್ಷಿಸಲು ಯತ್ನಿಸುತ್ತಿದ್ದಾಗ

ಫೈಝಾನ್ ನೀರಿನಲ್ಲಿ ಮುಳುಗಿದನೆನ್ನಲಾಗಿದೆ.

ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಇಬ್ಬರನ್ನು ಮೇಲಕ್ಕೇತ್ತಿ ಆಸ್ಪತ್ರೆ ಗೆ ತಲುಪಿಸಿದರೂ ಫೈಝಾನ್ ನ ಜೀವ ಉಳಿಸ ಲಾಗಲಿಲ್ಲ ಎಂದು ತಿಳಿದು ಬಂದಿದೆ.

ಝಿಯಾರತ್ ಗಾಗಿ ಬೆಂಗಳೂರಿನಿಂದ 11 ಮಂದಿಯ ತಂಡವು ಮಾಲಿಕ್ ದಿನಾ‌ರ್ ಮಸೀದಿಗೆ ತಲಪಿತ್ತು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Leave a Comment