ಮಂಗಳೂರು: ಸೆಂಟ್ರಲ್ ರೈಲ್ವೆ ನಿಲ್ದಾಣ ರಸ್ತೆಗೆ ಡಾ.ಬಾಳಪ್ಪ ಹೆಸರು ಸರ್ಕಾರದಿಂದ ಅನುಮೋದನೆ. ಶೀಘ್ರದಲ್ಲಿ ನಾಮಫಲಕ ಅನಾವರಣ ಕಾರ್ಯಕ್ರಮ: ಮಯೂರ್ ಉಳ್ಳಾಲ್.

Coastal Bulletin
ಮಂಗಳೂರು: ಸೆಂಟ್ರಲ್ ರೈಲ್ವೆ ನಿಲ್ದಾಣ ರಸ್ತೆಗೆ ಡಾ.ಬಾಳಪ್ಪ ಹೆಸರು ಸರ್ಕಾರದಿಂದ ಅನುಮೋದನೆ. ಶೀಘ್ರದಲ್ಲಿ ನಾಮಫಲಕ ಅನಾವರಣ ಕಾರ್ಯಕ್ರಮ: ಮಯೂರ್ ಉಳ್ಳಾಲ್.

ಮಂಗಳೂರು : ಸ್ವಾತಂತ್ರ್ಯ ಯೋಧ, ಸಮಾಜ ರತ್ನ, ಶೋಷಿತರ ಬದುಕಿನ ಆಶಾಕಿರಣ, ಸಹಕಾರಿ ದುರೀಣ, ಕುಲಾಲ ಸಮುದಾಯದ ನೇತಾರ ದಿ. ಡಾ.ಆಮ್ಮೆಂಬಳ ಬಾಳಪ್ಪರ ಹೆಸರು ಅಜರಾಮರವಾಗಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ವಿಶೇಷ ಮನವಿಯ ಮೇರೆಗೆ ಮಂಗಳೂರು ನಗರದ ಪುರಭವನದ ಎದುರಿನ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯನ್ನು "ಡಾ.ಅಮ್ಮೆಂಬಳ ಬಾಳಪ್ಪ ರಸ್ತೆ" ಎಂದು ನಾಮಕರಣ ಮಾಡಲು ಸರ್ಕಾರವು ಅನುಮೋದನೆ ನೀಡಿದ್ದು ಶೀಘ್ರದಲ್ಲಿ ಮಳೆ ಕಡಿಮೆಯಾದ ನಂತರ ಜಿಲ್ಲಾ ಮಾತೃ ಸಂಘದ ನೇತೃತ್ವದಲ್ಲಿ ದ ಕ ಜಿಲ್ಲಾಡಳಿತ ಹಾಗೂ ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ಸಹಾಭಾಗೀತ್ವದಲ್ಲಿ ಅದ್ದೂರಿಯಾಗಿ ನಾಮಫಲಕ ಅನಾವರಣ ಕಾರ್ಯಕ್ರಮ ಮಾಡಲಾಗುವುದು ಎಂದು ಮೂಲ್ಯರ ಯಾನೆ ಕುಲಾಲರ ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ತಿಳಿಸಿದ್ದಾರೆ.

ಸಂಘದ 3ಕನಸಿನ ಯೋಜನೆ:

ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘವು ಶತಮಾನದ ಸಂಭ್ರಮದ ಹೊಸ್ತಿಲಲ್ಲಿ ಇರುವ ಈ ಸಂದರ್ಭದಲ್ಲಿ ಮಾತೃ ಸಂಘದ 3ಕನಸಿನ ಯೋಜನೆಗಳಲ್ಲಿ ಈಗಾಗಲೇ"ಡಾ.ಅಮ್ಮೆಂಬಳ ಬಾಳಪ್ಪ ರಸ್ತೆ"ಯೋಜನೆ ಸಾಕಾರಗೊಂಡಿದ್ದು,2ನೇ ಯೋಜನೆ ನಗರ ಪ್ರದೇಶದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣ ಯೋಜನೆಯ ಕೂಡ ಪ್ರಗತಿಯಲ್ಲಿದ್ದು ನೀವೇಶನದ ನೋಂದಣಿ ಕಾರ್ಯವಾಗಿದ್ದು, ಮಾತೃ ಸಂಘದ 100ನೇ ವರ್ಷದ ಸಂದರ್ಭದಲ್ಲಿ ವಿದ್ಯಾರ್ಥಿ ನಿಲಯದ ಕಟ್ಟಡ ಪೂರ್ಣಗೊಳ್ಳಲಿದೆ 3ನೇ

ಯೋಜನೆ ಜಿಲ್ಲೆಯ ಸ್ವಜಾತಿ ಬಾಂಧವರ ಜನಗಣತಿ ಕಾರ್ಯವು ಈಗಾಗಲೇ ಪ್ರಾರಂಭಗೊಂಡಿದೆ ಎಂದು ತಿಳಿಸಿದರು.


 ಸಹಕರಿಸಿದವರಿಗೆ ಧನ್ಯವಾದ ಸಲ್ಲಿಕೆ:

"ಡಾ.ಅಮ್ಮೆಂಬಳ ಬಾಳಪ್ಪ ರಸ್ತೆ"ಯೋಜನೆಗೆ ಪ್ರಮುಖವಾಗಿ ಸಹಕರಿಸಿದ ಶಾಸಕರಾದ ವೇದವ್ಯಾಸ್ ಕಾಮತ್ ವಿಧಾನಸಭಾಧ್ಯಕ್ಷರಾದ ಮಾನ್ಯ ಯು ಟಿ ಖಾದರ್ ಹಾಗೂ ಕಾರ್ಪೊರೇಟರ್ ದಿವಾಕರ್ ಪ್ರಮುಖರಾದ ಪ್ರೇಮಾನಂದ ಕುಲಾಲ್, ಕಾರ್ಪೊರೇಟರ್ ಳಾದ ಗಣೇಶ್ ಕುಲಾಲ್, ಲೀಲಾವತಿ ಪ್ರಕಾಶ್ ಲೋಕೇಶ್ ಬೊಲ್ಲಜೆ ಇವರಿಗೆ ಮಯೂರ್ ಉಳ್ಳಾಲ್ ಧನ್ಯವಾದ ತಿಳಿಸಿದ್ದಾರೆ.

Leave a Comment