ಪೆರ್ಮಂಕಿ: ಪ್ರೀತಿ ಗೇಮ್ಸ್ ಕ್ಲಬ್ (ರಿ) ಆಶ್ರಯದಲ್ಲಿ 25ನೇ ವರ್ಷದ ಉಚಿತ ಪುಸ್ತಕ ವಿತರಣೆ.

Coastal Bulletin
ಪೆರ್ಮಂಕಿ: ಪ್ರೀತಿ ಗೇಮ್ಸ್ ಕ್ಲಬ್ (ರಿ) ಆಶ್ರಯದಲ್ಲಿ 25ನೇ ವರ್ಷದ ಉಚಿತ ಪುಸ್ತಕ ವಿತರಣೆ.

ಮಂಗಳೂರು :ಪೆರ್ಮಂಕಿ ಪ್ರೀತಿ ಗೇಮ್ಸ್ ಕ್ಲಬ್ (ರಿ). ಇದರ ಆಶ್ರಯದಲ್ಲಿ ಮಾಜಿ ಶಾಸಕರಾದ ದಿವಂಗತ ಎನ್. ಶಿವರಾವ್ ಇವರ ಸ್ಮರಣಾರ್ಥ 25ನೇ ವರ್ಷದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಆದಿತ್ಯವಾರದಂದು ಸಂಘದ ಕಚೇರಿಯಲ್ಲಿ ಜರಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಸತೀಶ್ ಪೂಜಾರಿ ಇವರು ವಹಿಸಿದ್ದರು. ಗೌರವ ಅಧ್ಯಕ್ಷರಾದ ಎನ್. ರವಿರಾಜ್ ರಾವ್ ಉಪಸ್ಥಿತರಿದ್ದರು. ರುಕ್ಮಯ ಪೂಜಾರಿ, ಪ್ರಶಾಂತ್ ಸಲ್ಧಾನ ಮತ್ತು ಸಂಘದ

ಸದಸ್ಯರು ಭಾಗವಹಿಸಿದರು. ಪೆರ್ಮಂಕಿಯ ಸುಮಾರು 85 ವಿದ್ಯಾರ್ಥಿಗಳು ಈ ಉಚಿತ ಪುಸ್ತಕದ ಸೌಲಭ್ಯವನ್ನು ಪಡೆದುಕೊಂಡರು.

ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಸಾಲಿಯಾನ್ ಇವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Comment