40 ಅಡಿ ಬಾವಿಗಿಳಿದು ಬೆಕ್ಕಿನ ಮರಿಯ ರಕ್ಷಣೆಯನ್ನು ಪೇಜಾವರ ಶ್ರೀಗಳು ಮಾಡಿದ್ದು, ಈ ಮೂಲಕ ಅವರ ಕೆಲಸಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದ್ದು, ಶ್ರೀಗಳ ಕೆಲಸವನ್ನು ನೋಡಿ ಸ್ವಾಮೀಜಿಗಳ ಈ ಪ್ರಾಣಿ ಪ್ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಮಾತ್ರವಲ್ಲ ಇದೀಗ ಶ್ರೀಗಳ ವಿಡೀಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ರವಿವಾರದಂದು ಮುಚ್ಚಲಕೋಡು ದೇವಸ್ಥಾನಕ್ಕೆ ಆಗಮಿಸಿದ್ದ ಸ್ವಾಮೀಜಿಗೆ ಅಲ್ಲಿನ ಸಿಬ್ಬಂದಿ, ದೇವಸ್ಥಾನದ ಬಾವಿಗೆ ಬೆಕ್ಕಿನ ಮರಿ ಬಿದ್ದಿರುವ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಸ್ವಾಮೀಜಿ ಬಾವಿಗೆ ಬಕೆಟ್ ಇಳಿಸಿ ಬೆಕ್ಕನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಿದರು. ಅದು ಸಾಧ್ಯವಾಗದೆ ಹೋದಾಗ ಸ್ವತಃ ಸ್ವಾಮೀಜಿಯೇ ಸುಮಾರು ಐದಡಿ ವ್ಯಾಸದ ಬಾವಿಗೆ
ಹಗ್ಗದ ಸಹಾಯದಿಂದ ಇಳಿದ್ದಾರೆ. ಈ ವೇಳೆ ಹೆದರಿದ ಬೆಕ್ಕಿನ ಮರಿ, ಸ್ವಾಮೀಜಿ ಇಳಿಸಿದ ಬಕೆಟ್‌ಗೆ ಹತ್ತಲಿಲ್ಲ.
ಕೊನೆಗೆ ಸ್ವಾಮೀಜಿಯೇ ತನ್ನ ಕೈಯಲ್ಲಿ ಬೆಕ್ಕಿನ ಮರಿಯನ್ನು ಹಿಡಿದುಕೊಂಡು ಮೇಲಕ್ಕೆ ತಂದು ರಕ್ಷಿಸಿದ್ದಾರೆ. ಸ್ವಾಮೀಜಿಯ ಈ ಪ್ರಯತ್ನಕ್ಕೆ ಭಕ್ತರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಹಾಗೂ ಸ್ವಾಮೀಜಿಯವರ ಪ್ರಾಣಿ ಪ್ರೀತಿಯನ್ನು ಕಂಡು ಸಂತೋಷ ವ್ಯಕ್ತಪಡಿಸಿದ್ದಾರೆ.















