ಬಂಟ್ವಾಳ : ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ( ನಿ.). ನೂತನ ಶಾಖೆಯ ಉದ್ಘಾಟನಾ ಸಮಾರಂಭ ಜೂ.25 ರಂದು ಸಾಯಿ ಕಾಂಪ್ಲೆಕ್ಸ್ ಕಡೆಗೋಳಿ ತುಂಬೆಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಕರ್ನಾಟಕ ವಿಧಾನ ಸಭೆ ಸಭಾಧ್ಯಕ್ಷರು ಸನ್ಮಾನ್ಯ ಶ್ರೀ ಯು.ಟಿ.ಖಾದರ್ ಉದ್ಘಾಟಿಸಲಿದ್ದಾರೆ. ಗಣಕಯಂತ್ರ ಉದ್ಘಾಟಕರಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಶಾಸಕರಾದ ಶ್ರೀ.ಯು.ರಾಜೇಶ್ ನಾಯ್ಕ್ ಹಾಗೂ ಭದ್ರತಾಕೋಶ ಉದ್ಘಾಟಕರಾಗಿ ಮಾಜಿ ಸಚಿವರು ಶ್ರೀ. ಬಿ.ರಮಾನಾಥ ರೈ
ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರಿನ ನಿರ್ದೇಶಕ ಶ್ರೀ. ಟಿ.ಜಿ.ರಾಜಾರಾಮ್ ಭಟ್ ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.















