Coastal Bulletin

ಶಿವಮೊಗ್ಗ: ಹಿಜಾಬ್ ವಿಷಯವಾಗಿ ಹೈಕೋರ್ಟ್ ವಿಧಿಸಿದ ನಿರ್ಬಂಧವನ್ನು ಉಲ್ಲಂಘಿಸಿ ಶಿವಮೊಗ್ಗದ ಕರ್ನಾಟಕ ಪ್ಲಬಿಕ್ ಶಾಲೆಯ 58 ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆ.

 ಈ ವಿದ್ಯಾರ್ಥಿಗಳು ಕಳೆದ ಮೂರು ದಿನಗಳಿಂದ ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ಮಾಡುತ್ತ ಪಾಠಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಉಳಿದ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ದೂರು ಸಲ್ಲಿಸಿದ್ದಾರೆ.

ಶಾಂತಿ ಕಾಪಾಡುವ

ಸಲುವಾಗಿ ಈ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೇ ಕಾಲೇಜಿನ ನಿಯಮಗಳಿಗೆ ಗೌರವಿಸುವ ವಿದ್ಯಾರ್ಥಿಗಳು ಹೆತ್ತವರ ಜೊತೆ ಆಗಮಿಸಿ ಲಿಖಿತ ಕ್ಷಮಾಪಣೆ ಪತ್ರ ಸಲ್ಲಿಸಬೇಕು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

Leave a Comment