Coastal Bulletin

ಮೂಡುಬಿದಿರೆ: ಹೊಸ್ಮಾರು ಶ್ರೀ ಲಕ್ಷ್ಮೀವೆಂಕಟೇಶ ಭಜನಾ ಮಂದಿರದ ವಾರ್ಷಿಕ ಏಕಾಹ ಭಜನೆಯ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀ ಲಕ್ಷ್ಮೀ ವೆಂಕಟೇಶ, ಸಪರಿವಾರ ಶ್ರೀ ರಾಮಚಂದ್ರ ದೇವರ ಸ್ವರ್ಣ ಲೇಪಿತ ನೂತನ ಬಿಂಬಗಳ ಪುನರ್ ಪ್ರತಿಷ್ಠೆ ಇತ್ತೀಚಿಗೆ ವೈಭವದಿಂದ ನೆರವೇರಿತು ಇದರ ಪೂರ್ವಭಾವಿಯಾಗಿ ಭಜಕ ಬಾಂಧವರ ನಗರ ಭಜನಾ ಸೇವೆಯ ಮೂಲಕ ಶ್ರೀ ದೇವರ ಬಿಂಬಗಳ ಗ್ರಾಮೋತ್ಸವವು ಜರುಗಿತು.

ಸುವರ್ಣ ಮಹೋತ್ಸವದ ಪ್ರಯುಕ್ತ ಶ್ರೀದೇವರ ಗರ್ಭಗುಡಿಗೆ ನೂತನ ಹಿತ್ತಾಳೆ ದ್ವಾರ , ನೂತನ ಉತ್ಸವ ಮಂಟಪವನ್ನು ಸಮರ್ಪಿಸಲಾಯಿತು. ಮಾಳದ ಲೋಹಶಿಲ್ಪಿ ಸುದರ್ಶನ್ ಚಿಪ್ಳೂಣ್ಕರ್ ಅವರನ್ನು ಭಜನಾ ಮಂದಿರದ ಪರವಾಗಿ ಅಧ್ಯಕ್ಷ ಗಣಪತಿ ಪೈ ಸನ್ಮಾನಿಸಿದರು. ಭಜನಾಮಂಡಳಿಯ ಉಪಾಧ್ಯಕ್ಷ ರತ್ನಾಕರ

ಪ್ರಭು, ಕಾರ್ಯದರ್ಶಿ ಸಂತೋಷ ಪೈ ಹಾಗೂ ಸೇವಾದಾರ ಉಮೇಶ್ ಪೈ, ಕೇಶವ ಶೆಣೈ, ಸುರೇಂದ್ರ ಶೆಣೈ ಮತ್ತಿತರರು ಉಪಸ್ಥಿತರಿದ್ದರು. ಫೆ.23 ರಿಂದ 26 ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಫೆ.27ರಂದು 50ನೇ ಅಹೋರಾತ್ರಿ ಏಕಾಹ ಭಜನೋತ್ಸವವು ಸಂಪನ್ನಗೊಳ್ಳಲಿದೆ.

Leave a Comment