breaking news

Coastal Bulletin

ಮಂಗಳೂರು ನಗರ ಕಮೀಷನರೆಟ್ ವ್ಯಾಪ್ತಿಯ ಹಲವು ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಏಕಕಾಲಕ್ಕೆ 21 ಕ್ಕೂ ಹೆಚ್ಚು ಸಿಬ್ಬಂದಿ ದಿಡೀರ್ ವರ್ಗಾವಣೆಗೊಳಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಕೊಣಾಜೆ ಠಾಣೆಯ 7 ಸಿಬ್ಬಂದಿಯನ್ನು ವರ್ಗಾಯಿಸಿ ಪೊಲೀಸ್ ಆಯುಕ್ತರ ಕಚೇರಿ ಆದೇಶ ಹೊರಡಿಸಿದೆ.

ಉಳ್ಳಾಲದ ಚಿದಾನಂದ ಇವರನ್ನು ಬಜಪೆ ಠಾಣೆ, ಪ್ರವೀಣ್ ಸಲೋಟಗಿ ಇವರನ್ನು ಮಂಗಳೂರು ಸಂಚಾರಿ ಠಾಣೆ ಪೂರ್ವ, ಸುರೇಶ್ ನಗ್ರಾಲ್ ಉಳ್ಳಾಲದಿಂದ ಬಜಪೆಗೆ. ಸಿಹೆಚ್‌ಸಿ ಕೊಣಾಜೆಯ ರವಿಚಂದ್ರ ಅವರನ್ನು ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಹಾಗೂ ಉಳ್ಳಾಲದ ಪ್ರವೀಣ್ ಶೆಟ್ಟಿ ಡಿ.ಬಿ ಇವರನ್ನು ಮಂಗಳೂರು ಪೂರ್ವ ದಂಚಾರಿ ಠಾಣೆ ಹಾಗೂ ಸಿಪಿಸಿ ಕೊಣಾಜೆಯ ಅನಿಲ್ ಕುಮಾರ್ ಅವರನ್ನು ದಕ್ಷಿಣ ಸಂಚಾರಿ ಠಾಣೆ, ಉಳ್ಳಾಲದ ಅಕ್ಬರ್ ಯದ್ರಾಮಿ ಅವರನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ, ಉಳ್ಳಾಲದ ರವಿ ಬಿಲ್ಲೂರು ಇವರನ್ನು ಬಜಪೆ ಠಾಣೆ, ಕೊಣಾಜೆಯ

ಚಂದ್ರಕಾ ಂತ್, ಅನಿಲ್ ಕುಮಾರ ವೈ.ಎಂ ಬಜಪೆ ಠಾಣೆ, 

ಉಳ್ಳಾಲದ ಮಾಣಿಕ್ ಪಣಂಬೂರು ಠಾಣೆಗೆ, ಬಲವಂತು ಇವರನ್ನು ಸಂಚಾರಿ ಉತ್ತರ ಠಾಣೆ,ದಾಕ್ಷಾಯಿಣಿ ಉಳ್ಳಾಲದಿಂದ ಬಜಪೆ, ರತ್ನವ್ವ ಕೊಣಾಜೆಯಿಂದ ಉಳ್ಳಾಲಕ್ಕೆ, ಪ್ರಿಯಾ ಬಿರಾದಾರ್ ಕೊಣಾಜೆಯಿಂದ ಬಜಪೆಗೆ, ಬರ್ಮ ಬಡೀಗೇರ್ ಕೊಣಾಜೆಯಿಂದ ಬಜಪೆ ಠಾಣೆಗೆ, ಪುರುಷೋತ್ತಮ್ ಕೊಣಾಜೆಯಿಂದ ಸಿಸಿಬಿ ಠಾಣೆಗೆಹಾಗೇ ಸಿದ್ದಪ್ಪ ಹಿರೇಕುಂಬಿ ಉಳ್ಳಾಲದಿಂದ ಪಣಂಬೂರು ಠಾಣೆಗೆ, ಸತೀಶ್ ಕುಮಾರ್ ಉಳ್ಳಾಲದಿಂದ ಉತ್ತರ ಠಾಣೆಗೆ, ಹನುಮ ನಾಯ್ಕ್, ಕೆಂಪರಾಜ್ ಇವರನ್ನು ಉಳ್ಳಾಲದಿಂದ ಮಂಗಳೂರು ಉತ್ತರ ಠಾಣೆಗೆ, ಸಾಗರ್ ದೇವರಕಟ್ಟಿ ಉಳ್ಳಾಲದಿಂದ ದಕ್ಷಿಣ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

Leave a Comment