Coastal Bulletin

ಬೆಂಗಳೂರು : ಅನ್ನಭಾಗ್ಯ ಯೋಜನೆ ಜಾರಿ ಮಾಡಲು ಅಕ್ಕಿಯ ಸಮಸ್ಯೆ ಎದುರಾಗಿದ್ದು ಕರ್ನಾಟಕ ರಾಜ್ಯ ಆಹಾರ ಇಲಾಖೆ ಪಂಜಾಬ್, ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ಛತ್ತಿಸ್‌ಗಡ್, ಮಧ್ಯಪ್ರದೇಶ ರಾಜ್ಯಗಳನ್ನ ಸಂಪರ್ಕ ಮಾಡಿ ಅಕ್ಕಿ ನೀಡುವಂತೆ ಮನವಿ ಮಾಡಿಕೊಂಡಿದೆ.

ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಗಂಭೀರ ಆರೋಪವನ್ನು ಮಾಡಿದೆ. ಮೋದಿ ಸರ್ಕಾರ ಅಕ್ಕಿ ಕೊಡಲು ಅನುಮತಿ ನೀಡಲಿ ಅಥವಾ ನೀಡದೆ ಇರಲಿ ಆದರೆ ನಾವು ಮಾತ್ರ ಕೊಟ್ಟ ಮಾತಿನಂತೆ ಅನ್ನಭಾಗ್ಯ ಯೋಜನೆ ಜಾರಿ ಮಾಡಲು ಶತಸಿದ್ಧ ಎಂದು ಕಾಂಗ್ರೆಸ್ ಸರ್ಕಾರ

ತನ್ನ ಮಾತನ್ನು ಪುನರುಚ್ಚಿಸಿದೆ. 

ಸಿಎಂ ಸಿದ್ದರಾಮಯ್ಯ ಅವರು ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರಿಗೆ ಕರೆ ಮಾಡಿ ನಮಗೆ 24 ಲಕ್ಷ ಟನ್ ನಷ್ಟು ಅಕ್ಕಿಯ  ಅವಶ್ಯಕತೆ ಇದೆ. ನಿಮ್ಮ ಬಳಿ ಇದ್ದರೆ ಬೆಲೆ ಎಷ್ಟು ಎಂದು ತಿಳಿಸಿ ನಾವು ಖರೀದಿಸುತ್ತೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

Leave a Comment