ಬಂಟ್ವಾಳ :ಚಕ್ರವರ್ತಿ ಸೂಲಿಬೆಲೆ ಬರೆದ "ತಾಯಿ ಭಾರತೀಯ ಅಮರ ಪುತ್ರರು" ಪಾಠಕ್ಕೆ ಕತ್ತರಿಪಿ ಪ್ರಯೋಗ ಮಾಡಿ ಪಠ್ಯ ಪುಸ್ತಕದಿಂದ ತೆಗೆದದನ್ನು ಬಿಜೆಪಿ ಯುವಮೋರ್ಚಾ ಬಂಟ್ವಾಳ ಇದರ ಹಂಗಾಮಿ ಅಧ್ಯಕ್ಷರಾದ ಕಿಶೋರ್ ಪಲ್ಲಿಪಾಡಿ ತೀವ್ರವಾಗಿ ವಿರೋದಿಸಿದ್ದಾರೆ.
ನಮ್ಮ ಭಾರತಕ್ಕೆ ದಂಡೆತ್ತಿ ಬಂದು ಭಾರತವನ್ನು ದೋಚಿದ ಆಕ್ರಮಣಕಾರರ ಪಠ್ಯ ವನ್ನು ನಮ್ಮ ಮಕ್ಕಳು ಓದಬೇಕು,ಈ ದೇಶಕ್ಕಾಗಿ ತನ್ನ ಹರೆಯದ ಪ್ರಾಯದಲ್ಲಿ ನೇಣುಗಂಬ ವೇರಿ ಪ್ರಾಣ ಅರ್ಪಣೆ ಗೈದ ಕ್ರಾಂತಿಕಾರಿಗಳ, ತ್ಯಾಗಿಗಳ ಪಠ್ಯವನ್ನು ನಮ್ಮ ಮಕ್ಕಳು ಓದಬಾರದು ಇದು
ಯಾವ ನ್ಯಾಯ ಎಂದು ಪ್ರಶನಿದ್ದಾರೆ
ಇದು ಚಕ್ರವರ್ತಿ ಸೂಲಿಬೆಲೆ ಅವರಿಗೆ ಮಾಡಿದ ಅವಮಾನ ಅಲ್ಲ, ತಾಯಿ ಭಾರತಾಂಬೆಗೆ ಮಾಡಿದ ಅವಮಾನ ಭಾರತ ದೇಶಕ್ಕೆ ಮಾಡಿದ ಅವಮಾನ ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಕಿಶೋರ್ ಪಲ್ಲಿಪಾಡಿ ಕೋಸ್ಟಲ್ ಬುಲೆಟಿನ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.















