ಕರ್ನಾಟಕ ಸಾರಿಗೆ ಸಂಸ್ಥೆಯ ವಿರುದ್ಧ ಸಲ್ಲಿಸಿದ್ದ ಕೇರಳ ಸರಕಾರದ ಅರ್ಜಿಯನ್ನು ವಜಾಮಾಡಿದ ಹೈಕೋರ್ಟ್, ಅಂತ್ಯಕಂಡ KSRTC ನಾಮ ಬಳಕೆಯ ತಕರಾರು!

Coastal Bulletin
ಕರ್ನಾಟಕ ಸಾರಿಗೆ ಸಂಸ್ಥೆಯ ವಿರುದ್ಧ ಸಲ್ಲಿಸಿದ್ದ ಕೇರಳ ಸರಕಾರದ ಅರ್ಜಿಯನ್ನು ವಜಾಮಾಡಿದ ಹೈಕೋರ್ಟ್, ಅಂತ್ಯಕಂಡ KSRTC ನಾಮ ಬಳಕೆಯ ತಕರಾರು!

ಬೆಂಗಳೂರು: ಕರ್ನಾಟಕದ ಸಾರಿಗೆ (KSRTC) ಹೆಸರು ಬಳಕೆಯನ್ನು ಪ್ರಶ್ನಿಸಿ ಕೇರಳ ಆರ್‌ಟಿಸಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ಇಂದು (ಡಿಸೆಂಬರ್‌ 15) ವಜಾ ಮಾಡಿದೆ. ಈ ಮೂಲಕ ಕರ್ನಾಟಕ ಕೆಎಸ್‌ಆರ್‌ಟಿಸಿಗೆ ಜಯ ಸಿಕ್ಕಿದ್ದು, ಕೇರಳಕ್ಕೆ ಭಾರೀ ಮುಖಭಂಗ ಆದಂತಾಗಿದೆ.

ಕರ್ನಾಟಕ ಹಾಗೂ ಕೇರಳ ಸಾರಿಗೆ ಬಸ್‌ಗಳ ಹೆಸರು ಕೆಎಸ್‌ಆರ್‌ಟಿಸಿ ಅಂತಾ ಇತ್ತು. ಅದಕ್ಕೆ ಈ ಹಸರು ಬದಲಾವಣೆ ಮಾಡಿಕೊಳ್ಳಲು ಕೇರಳ ಆಗಾಗಾ ಕರ್ನಾಟಕದ ವಿರುದ್ಧ ತರಾಟೆಗೆ ಬರುತ್ತಿತ್ತು. ಅಲ್ಲದೆ ಇದನ್ನು ಪ್ರಶ್ನಿಸಿ ತಕರಾರು ಕೂಡ ಸಲ್ಲಿಕೆ ಮಾಡಿದ್ದು, ಇದನ್ನು ಇಂದು ಮದ್ರಾಸ್‌ ಹೈಕೋರ್ಟ್‌ ವಜಾ ಮಾಡಿದೆ. ಇದರಿಂದ ಕೆಣಕಿದ ಕೇರಳ ಕೊನೆಗೂ ಮುಖಭಂಗಕ್ಕೆ ಒಳಗಾಗಿದೆ.

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚೆನ್ನೈನಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ ಮುಂದೆ ಕೇರಳ ಸಾರಿಗೆ ನಿಗಮದಿಂದ ಪ್ರಶ್ನೆ ಮಾಡಲಾಗಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 42 ವರ್ಷಗಳಿಂದ ಕರ್ನಾಟಕ ರಸ್ತೆ ಸಾರಿಗೆ ನಿಮಗದಿಂದ ಟ್ರೇಡ್ ಮಾರ್ಕ್ ಅನ್ನು ಬಳಸುವುದರ ಬಗ್ಗೆ ತಿಳಿದಿರುತ್ತದೆ. ಆದ್ದರಿಂದ ಕೇರಳದ ಕೆಎಸ್‌ಆರ್‌ಟಿಸಿಯು ಪಡೆದಿರುವ ಟ್ರೇಡ್ ಮಾರ್ಕ್ ನೋಂದಣಿ ಅಮಾನ್ಯವಾಗಿದೆ

ಎಂದು ಅರ್ಜಿ ಸಲ್ಲಿಸಲು ನೀವು ಅರ್ಹರಾಗಿರುವುದಿಲ್ಲ ಎಂದು ಕರ್ನಾಟಕ ಕೆಎಸ್‌ಆರ್‌ಟಿಸಿ ವಾದ ಮಾಡಿದೆ.

ಕರ್ನಾಟಕ ಪಡೆದಿರುವ ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ನೋಂದಣಿ ಅಮಾನ್ಯವಾಗಿದೆ. ಹೀಗಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ ಎಂದು ಕೇರಳ RTC ವಾದಿಸಿತ್ತು. ಕೆಎಸ್‌ಆರ್‌ಟಿಸಿ, ಕೇರಳ ಆರ್‌ಟಿಸಿ ವಾದ ಆಲಿಸಿದ ಕೋರ್ಟ್​ ಕೇರಳ ಸಾರಿಗೆ ಸಂಸ್ಥೆ ಅರ್ಜಿ ವಜಾ ಮಾಡಿದೆ. ಕೇರಳ KRTC ಕೂಡ 2019ರಲ್ಲಿ KSRTCಗೂ ಹಿಂದಿನಿಂದ ಸಂಕ್ಷಿಪ್ತ ಹೆಸರನ್ನು ಬಳಸುತ್ತಿರುವ ಕುರಿತು ನೋಂದಣಿಯನ್ನು ಪಡೆದುಕೊಂಡಿದೆ.

ನಂತರ ಕೇಂದ್ರ ಸರ್ಕಾರವು ಐಪಿಎಬಿಯನ್ನು ರದ್ದುಗೊಳಿಸಿದ್ದು, ಐಪಿಎಬಿ ಮುಂದೆ ಬಾಕಿ ಉಳಿದಿದ್ದ ಪ್ರಕರಣಗಳನ್ನು ಚೆನ್ನೈನಲ್ಲಿರುವ ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಈ ಪ್ರಕರಣ ಡಿಸೆಂಬರ್‌ 12ರಂದು ಮದ್ರಾಸ್ ಹೈಕೋರ್ಟ್ ಮುಂದೆ ಬಂದಿದ್ದು, ಇದೀಗ ಕೇರಳ RTC ಸಲ್ಲಿಸಿದ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿದೆ ಎಂದು ತಿಳಿದುಬಂದಿದೆ.

Leave a Comment