ಹಾಡಹಗಲೇ ಪ್ರಿಯಕರನಿಂದ ವಿದ್ಯಾರ್ಥಿನಿಯ ಬರ್ಬರ ಕೊಲೆ

Coastal Bulletin
ಹಾಡಹಗಲೇ ಪ್ರಿಯಕರನಿಂದ ವಿದ್ಯಾರ್ಥಿನಿಯ ಬರ್ಬರ ಕೊಲೆ

ಬೆಂಗಳೂರು: ಕಾಲೇಜು ವಿದ್ಯಾರ್ಥಿನಿಯನ್ನು ಪ್ರಿಯಕರ ಬರ್ಬರವಾಗಿ ಹತ್ಯೆ (Murder) ಮಾಡಿದ ಘಟನೆ ಶ್ರೀರಾಮಪುರ ರೈಲ್ವೇ ಟ್ರ‍್ಯಾಕ್ ಬಳಿ ನಡೆದಿದೆ.

ಯಾಮಿನಿ ಪ್ರಿಯ (20) ಕೊಲೆಯಾದ ವಿದ್ಯಾರ್ಥಿನಿ. ಬನಶಂಕರಿಯ ಕಾಲೇಜಿನಲ್ಲಿ ಬಿ ಫಾರ್ಮಸಿ ಓದುತ್ತಿದ್ದ ವಿದ್ಯಾರ್ಥಿನಿ (Student) ಇಂದು ಬೆಳಗ್ಗೆ ಮನೆಯಿಂದ ಕಾಲೇಜಿಗೆ ತೆರಳಿದ್ದಳು.

ಕಾಲೇಜಿನಿಂದ (College) ಪರೀಕ್ಷೆ ಮುಗಿಸಿ ಮನೆಗೆ ಬರುತ್ತಿದ್ದಳು. ಮಂತ್ರಿ ಮಾಲ್ ಬಳಿ ಇಳಿದು ರೈಲ್ವೆ ಟ್ರ‍್ಯಾಕ್ ಬಳಿ ಹೋಗ್ತಿದ್ದಾಗ ಹಿಂದಿನಿಂದ ಬಂದು ಕತ್ತುಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದನೆ.

ಯಾಮಿನಿಯ ಹಿಂದೆ ಪ್ರಿಯಕರ ವಿಘ್ನೇಶ್‌

ಬಿದ್ದಿದ್ದ. ವಿಫ್ನೇಶ್‌ ಪ್ರೀತಿಯನ್ನು ಯಾಮಿನಿ ತಿರಸ್ಕರಿಸಿದ್ದಳು. ಇಂದು ಮನೆಗೆ ಹೋಗುತ್ತಿದ್ದಾಗ ವಿಘ್ನೇಶ್‌ ಯಾಮಿನಿಯನ್ನು ಹಿಂಬಾಲಿಸಿದ್ದಾನೆ.

ರೈಲ್ವೇ ಟ್ರ‍್ಯಾಕ್ ಬಳಿ ಬರುವಾಗ ಕಣ್ಣಿಗೆ ಕಾರಣ ಪುಡಿ ಹಾಕಿ ಮನಸೋ ಇಚ್ಚೆ ದಾಳಿ ನಡೆಸಿದ್ದಾನೆ. ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದರಿಂದ ತೀವ್ರ ರಕ್ತಸ್ರಾವದಿಂದ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಆಗಮಿಸಿ ಶ್ರೀರಾಂಪುರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Leave a Comment