ಲೋಕಸಭಾ ಚುನಾವಣೆ ಗುರಿಯಾಗಿಟ್ಟುಕೊಂಡ ಬೃಹತ್ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ.

Coastal Bulletin
ಲೋಕಸಭಾ ಚುನಾವಣೆ ಗುರಿಯಾಗಿಟ್ಟುಕೊಂಡ ಬೃಹತ್ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ.

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 15ನೇ ಬಾರಿಗೆ ಕರ್ನಾಟಕ ಬಜೆಟ್ ಮಂಡಿಸಿದ್ದಾರೆ. ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಉಳಿದಿರುವ ಹೊತ್ತಲ್ಲಿ ಈ ಬಜೆಟ್ ಮಂಡನೆಯಾಗಿದೆ. ಕೇಂದ್ರ ಸರ್ಕಾರ ತೆರಿಗೆ ಪಾಲು ನೀಡುತ್ತಿಲ್ಲ ಅನ್ನೋ ಆರೋಪಗಳ ನಡುವಲ್ಲೇ ಮಂಡನೆಯಾಗಿರುವ ಬಜೆಟ್‌ನ ಮುಖ್ಯಾಂಶಗಳೇನು? ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.

*ಬಿಯರ್ ದರ ಮತ್ತೆ ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನ

*ಆನ್‌ಲೈನ್ ಡೆಲಿವರಿ ಮೇಲೆ ಸೆಸ್ ವಿಧಿಸಲು ಸರ್ಕಾರ ತೀರ್ಮಾನ

*ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ರೂಪಿಸಲು ಸರ್ಕಾರದ ತೀರ್ಮಾನ

*ಬೆಂಗಳೂರು ನಗರ ವಿಶ್ವದರ್ಜೆಗೇರಿಸಲು ಬ್ರಾಂಡ್ ಬೆಂಗಳೂರು

*ಬೆಂಗಳೂರು ಟ್ರಾಫಿಕ್ ಜಾಮ್‌ಗೆ ಸುರಂಗ ಮಾರ್ಗ ಪರಿಹಾರ

*ಬೆಂಗಳೂರಿನಲ್ಲಿ 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಾಣ

*ಹೊಸದಾಗಿ 44 ಕಿ. ಮೀ. ಮೆಟ್ರೋ ಮಾರ್ಗ ಸೇರ್ಪಡೆ

*ವಿಮಾನ ನಿಲ್ದಾಣ ಮೆಟ್ರೋ ಮಾರ್ಗ 2026ಕ್ಕೆ ಪೂರ್ಣ

*ಕಾವೇರಿ ಹಂತ - 5: ಡಿಸೆಂಬರ್ 2024ರ ಒಳಗೆ ಕಾಮಗಾರಿ ಪೂರ್ಣ

*ಬೆಂಗಳೂರಿನ ಕೆ. ಸಿ. ಜನರಲ್ ಆಸ್ಪತ್ರೆ ಅಭಿವೃದ್ದಿಗೆ 150 ಕೋಟಿ ರೂ. ಅನುದಾನ

*ಆನೇಕಲ್, ನೆಲಮಂಗಲದಲ್ಲಿ ಹೊಸ ಆಸ್ಪತ್ರೆ


*ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಮೀಸಲು

*ರಾಜ್ಯಾದ್ಯಂತ ಮಹಿಳೆಯರೇ ನಡೆಸುವ 50 ಹೋಟೆಲ್ ಕೆಫೆ ನಿರ್ಮಾಣ - ಸ್ಥಳೀಯ ಆಹಾರಕ್ಕೆ ಒತ್ತು

*ಸಿಎಂ ಸಿದ್ದು ಪ್ರತಿನಿಧಿಸುವ ವರುಣಾ ಕ್ಷೇತ್ರಕ್ಕೆ 2 ಸಾವಿರ ಕೋಟಿ ರೂ. ಮೀಸಲು

*ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಕಿಸಾನ್ ಮಾಲ್ ಸ್ಥಾಪನೆ

*ಮಾಜಿ ಸಿಎಂ ಎಸ್. ಬಂಗಾರಪ್ಪ ಸ್ಮಾರಕ ನಿರ್ಮಾಣ ಘೋಷಣೆ

*ವಿಜಯಪುರದಲ್ಲಿ ತೋಟಗಾರಿಕಾ ಕಾಲೇಜು

*ಸಮಗ್ರ ಕೃಷಿ ಉತ್ತೇಜಿಸುವ ಕರ್ನಾಟಕ ರೈತ ಸಮೃದ್ದಿ ಯೋಜನೆ

*ಸಿರಿಧಾನ್ಯಗಳಿಗಾಗಿ 'ನಮ್ಮ ಮಿಲ್ಲೆಟ್' ಹೊಸ ಯೋಜನೆ ಪ್ರಾರಂಭ

*ಅಂಗನವಾಡಿ

ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್

*80 ವರ್ಷ ದಾಟಿದ ವೃದ್ಧರಿಗೆ ಆಹಾರ ಒದಗಿಸಲು 'ಅನ್ನ ಸುವಿಧಾ' ಯೋಜನೆ

*ಕಲ್ಯಾಣ ಪಥ ಯೋಜನೆ ಅಡಿ ಕಲ್ಯಾಣ ಕರ್ನಾಟಕದಲ್ಲಿ ರಸ್ತೆ ಅಭಿವೃದ್ದಿ

*ಬೆಳಗಾವಿ ನಗರದಲ್ಲಿ 4.5 ಕಿ. ಮೀ. ಉದ್ದದ ಎಲಿವೇಟೆಡ್ ಕಾರಿಡಾರ್ ಮೇಲ್ಸೇತುವೆ ನಿರ್ಮಾಣ.


*ಬಸವ ಜಯಂತಿಯಂದು ಸರ್ವ ಧರ್ಮ ಸಂಸತ್ತು ಆಯೋಜನೆ

*ಹೊರ ರಾಜ್ಯಗಳಲ್ಲಿನ ಪವಿತ್ರ ಪುಣ್ಯಕ್ಷೇತ್ರಗಳಾದ ತಿರುಮಲ, ಶ್ರೀಶೈಲ, ವಾರಣಾಸಿ ಮತ್ತು ಗುಡ್ಡಾಪುರಕ್ಕೆ ಭೇಟಿ ನೀಡುವ ಕರ್ನಾಟಕದ ಭಕ್ತಾಧಿಗಳ ಅನುಕೂಲಕ್ಕಾಗಿ ಸುಸಜ್ಜಿತ ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ.

*ತಿರುಮಲದಲ್ಲಿ 200 ಕೋಟಿ ರೂ.ಗಳ ಕಾಮಗಾರಿ ಅಂತಿಮ ಹಂತದಲ್ಲಿದೆ.

*ಶ್ರೀಶೈಲದಲ್ಲಿ 85 ಕೋಟಿ ರೂ. ವೆಚ್ಚದಲ್ಲಿ ಮತ್ತು ಗುಡ್ಡಾಪುರದಲ್ಲಿ 11 ಕೋಟಿ ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ.

*ಪ್ರಸಕ್ತ ಸಾಲಿನಲ್ಲಿ ವಾರಣಾಸಿಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.

*ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸಲು ರಾಯಚೂರಿನ ಚಿಕ್ಕಮಂಚಾಲಿ ಗ್ರಾಮದ ಬಳಿ ಬ್ರಿಡ್ಜ್-ಕಂ-ಬ್ಯಾರೇಜ್ ಅನ್ನು ಲೋಕೋಪಯೋಗಿ 3 ಇಲಾಖೆ ವತಿಯಿಂದ ಕೈಗೆತ್ತಿಕೊಳ್ಳಲಾಗುವುದು. *158 ಕೋಟಿ ರೂ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.

*ರಾಜ್ಯದಲ್ಲಿನ ವಕ್ಫ್‌ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ

*ಮಂಗಳೂರಿನಲ್ಲಿ ಹಜ್ ಭವನ ಕಾಮಗಾರಿಗೆ 10 ಕೋಟಿ ರೂ. ಮೀಸಲು.

Leave a Comment