Coastal Bulletin

ಬೀದರ್: ಬೀದರ್- ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಸಂಚಾರ ಇಂದು ಆರಂಭವಾಗಲಿದ್ದು, ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ವಿಮಾನ ಸೇವೆಗೆ ಚಾಲನೆ ನೀಡಲಿದ್ದಾರೆ.

ಸ್ಟಾರ್ ಏರ್ ಸಂಸ್ಥೆಯು ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ವಾರದಲ್ಲಿ ನಾಲ್ಕು ದಿನ ಅಂದರೆ ಭಾನುವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೀದರ್-ಬೆಂಗಳೂರು ಮಧ್ಯೆ ವಿಮಾನ ಯಾನ ಸೇವೆ ಒದಗಿಸಲಿದೆ.

ಒಂದು ಬದಿಗೆ ಒಂದು, ಇನ್ನೊಂದು ಬದಿಗೆ ಎರಡು ಆಸನಗಳಿರುವ ವಿಮಾನದಲ್ಲಿ ಒಟ್ಟು 50 ಜನ ಸಂಚರಿಸಬಹುದಾಗಿದೆ. 50 ನಿಮಿಷಗಳಲ್ಲಿ ಬೀದರ್‍ನಿಂದ ಬೆಂಗಳೂರಿಗೆ

ತಲುಪಲಿದೆ. ಪ್ರಯಾಣ ವೆಚ್ಚ ₹ 2,599 ಆಗಿದೆ.

ವಿಮಾನದಲ್ಲಿ ಮೊದಲು ಟಿಕೆಟ್ ಬುಕ್ ಮಾಡಿದವರು ಅತಿಥಿಯಿಂದ ಪ್ರಶಸ್ತಿ ಪಡೆಯುವ ಅವಕಾಶ ಪಡೆಯಲಿದ್ದಾರೆ. ಮೊದಲು ಬರುವ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ಸಿಗಲಿದೆ.

ಮಧ್ಯಾಹ್ನ 2.55ಕ್ಕೆ ವಿಮಾನ ಬೆಂಗಳೂರಿನಿಂದ ಹೊರಟು ಸಂಜೆ 4.05ಕ್ಕೆ ಬೀದರ್‍ಗೆ ಬರಲಿದೆ. ವಿಮಾನಕ್ಕೆ ವಾಟರ್ ಸೆಲ್ಯೂಟ್, ಲೈಟಿಂಗ್ ಲ್ಯಾಂಪ್ ಸ್ವಾಗತ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ.

Leave a Comment