ಬಿಜೆಪಿಯಿಂದ ಲೋಕಸಭಾ ಟಿಕೆಟ್ ಸಿಗುತ್ತಿದ್ದಂತೆ ಯದುವೀರ್ ಅವರಿಗೆ ಎದುರಾಗಿದೆ ದೊಡ್ಡ ಆಘಾತ!

Coastal Bulletin
ಬಿಜೆಪಿಯಿಂದ ಲೋಕಸಭಾ ಟಿಕೆಟ್ ಸಿಗುತ್ತಿದ್ದಂತೆ ಯದುವೀರ್ ಅವರಿಗೆ ಎದುರಾಗಿದೆ ದೊಡ್ಡ ಆಘಾತ!

ಬೆಂಗಳೂರು : ಮೈಸೂರಿನ ರಾಜವಂಶದ, ಯದುವೀರ ಕೃಷ್ಣದತ್ತ ಒಡೆಯರ್ ಅವರಿಗೆ ಪ್ರತಾಪ್ ಸಿಂಹ ಅವರ ಕೈತಪ್ಪಿದ ಟಿಕೆಟ್ ಸಿಕ್ಕಿದೆ. ಇದೇ ಖುಷಿ ಸಮಯದಲ್ಲೀಗ ಯದುವೀರ್ ಅವರಿಗೆ ದೊಡ್ಡ ಆಘಾತ ಕೂಡ ಎದುರಾಗಿದೆ!

ಮೈಸೂರು ರಾಜವಂಶಕ್ಕೆ ಭಾರಿ ಪ್ರಮಾಣದ ಆಸ್ತಿ ಇದೆ. ಈ ಪೈಕಿ ಬೆಂಗಳೂರು ನಗರದಲ್ಲಿ ಮೈಸೂರು ರಾಜವಂಶಕ್ಕೆ ಸೇರಿದ ಹಲವು ಆಸ್ತಿಗಳು ಇವೆ. ಇದರಲ್ಲಿ ಬರುತ್ತಿರುವ ಆದಾಯ ಅಂದ್ರೆ ಹಣ ರಾಜವಂಶಕ್ಕೆ ಸೇರಿದ್ದು. ಹೀಗಿದ್ದಾಗಲೇ ಬೆಂಗಳೂರು ಪ್ಯಾಲೆಸ್ ಗ್ರೌಂಡ್ ಬಗ್ಗೆ ಆಗಾಗ ಕಿರಿಕ್ ಆಗುತ್ತಲೇ ಇರುತ್ತದೆ.

ಮೈಸೂರು ರಾಜವಂಶದ ಆಸ್ತಿ ಎಂಬ ಮಾತಿನ ನಡುವೆಯು ಇಲ್ಲ ಎಂಬ ವಾದವೂ ಇದೆ. ಹೀಗಿದ್ದಾಗ ಇದೀಗ ಕರ್ನಾಟಕ ಸರ್ಕಾರ ಬೆಂಗಳೂರು ಪ್ಯಾಲೆಸ್ ಗ್ರೌಂಡ್ ವಿಚಾರದಲ್ಲಿ ಕಠಿಣ ಕ್ರಮ ಕೈಗೊಂಡಿದೆ. ಇದು ಮೈಸೂರು ರಾಜವಂಶದ ಯದುವೀರ್‌ಗೆ ದೊಡ್ಡ ಆಘಾತ ನೀಡಿದೆ ಎಂಬ ಮಾತು ಕೇಳಿಬರುತ್ತಿದೆ.

ಇಂದು ನಡೆದ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಂಪುಟ ಸಭೆಯಲ್ಲಿ ಈಗ, ಮಹತ್ವದ ನಿರ್ಧಾರ ಕೈಗೊಳ್ಳಾಗಿದ್ದು. ಈ ಪೈಕಿ ಪ್ರಮುಖವಾಗಿ, ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ಬಳಿ ರಸ್ತೆ ಅಗಲೀಕರಣಕ್ಕೆ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಇಲ್ಲಿ ಭಾರಿ

ಪ್ರಮಾಣದ ಟ್ರಾಫಿಕ್ ಉಂಟಾಗುತ್ತಿರುವ ಕಾರಣಕ್ಕೆ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಇದೇ ಬೆಂಗಳೂರು ಪ್ಯಾಲೆಸ್ ಗ್ರೌಂಡ್ ಮೈಸೂರಿನ ರಾಜವಂಶದ ಆಸ್ತಿ ಎಂಬ ವಾದದ ನಡುವೆ ಸಿದ್ದರಾಮಯ್ಯ ಅವರ ಸರ್ಕಾರದ ಕ್ರಮ ಈಗ ಭಾರಿ ಚರ್ಚೆಗೆ ವೇದಿಕೆ ಒದಗಿಸಿದೆ.

ಕಾಂಗ್ರೆಸ್ ಸರ್ಕಾರ ಪ್ಯಾಲೆಸ್ ಗ್ರೌಂಡ್ ಬಳಿ ರಸ್ತೆ ಅಗಲೀಕರಣವನ್ನ ಮಾಡಲು ಮುಂದಾದ ಸಮಯದಲ್ಲೇ, ಯದುವೀರ್ ಅವರನ್ನ ಟಾರ್ಗೆಟ್ ಮಾಡುತ್ತಿದ್ದಾರ? ಎಂಬ ಆರೋಪ ಕೂಡ ಕೇಳಿಬಂದಿದೆ. ಆದರೆ ಬೆಂಗಳೂರು ಪ್ಯಾಲೆಸ್ ರಸ್ತೆಯಲ್ಲಿ ಟ್ರಾಫಿಕ್ ನರಕ ನೋಡುತ್ತಿರುವ ವಾಹನ ಸವಾರರಿಗೆ ಮಾತ್ರ ಈ ಸುದ್ದಿ ಕೇಳಿ ರಿಲೀಫ್ ಸಿಕ್ಕಿದೆ. ಯಾಕೆ ಅಂದ್ರೆ ಈ ರಸ್ತೆಯಲ್ಲಿ ಓಡಾಡಿದ ಸವಾರರಿಗೆ ಮಾತ್ರ ಗೊತ್ತು ಇಲ್ಲಿ ಹೇಗೆ ಟ್ರಾಫಿಕ್ ಇರುತ್ತೆ ಅನ್ನೋದು. ಹೀಗಾಗಿ ಇದೀಗ ದಿಢೀರ್ ಕರ್ನಾಟಕ ಸರ್ಕಾರ ಕೈಗೊಂಡಿರುವ ನಿರ್ಧಾರದಿಂದ ಬಿಸಿಬಿಸಿ ಚರ್ಚೆ ಕೂಡ ಶುರುವಾಗಿದೆ.

Leave a Comment