Coastal Bulletin

ಹಲವು ಚಿತ್ರಗಳಲ್ಲಿ ಖಳನಾಯಕನ ಪಾತ್ರ ಮಾಡಿದ್ದ ಕಜಾನ್ ಖಾನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಿನಿ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.ಅನೇಕ ಚಿತ್ರಗಳಲ್ಲಿ ಕಜಾನ್ ಖಾನ್ ಖಳನಾಯಕನ ಪಾತ್ರ ಮಾಡಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ವಿಲನ್ ರೋಲ್‍ಗೆ ತಕ್ಕವರು ಎಂದು ಅದೆಷ್ಟೋ ಅಭಿಮಾನಿಗಳು ಹೇಳಿದ್ದಾರೆ. ಇವರು ಮುಖ್ಯವಾಗಿ ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ.

ಕಜಾನ್ ಖಾನ್ 1993 ರಲ್ಲಿ ಮೋಹನ್ ಲಾಲ್ ಅವರ ಗಂಧರ್ವಂ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿದರು. ಮಲಯಾಳಂ ನಟ ದಿಲೀಪ್ ಅಭಿನಯದ ಸಿಐಡಿ ಮೂಸಾ ಚಿತ್ರದಲ್ಲಿನ ವಿಲನ್

ಪಾತ್ರಕ್ಕಾಗಿ ಮೆಚ್ಚುಗೆಯನ್ನು ಪಡೆದರು.ಕನ್ನಡ ಚಿತ್ರರಂಗದಲ್ಲೂ ಇವರ ಕೊಡುಗೆ ಇದೆ. ಹಬ್ಬ, ನಾಗದೇವತೆ ಮತ್ತು ಚೆಲುವ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಅಭಿಮಾನಿಗಳಿಗೂ ಇವರ ನಟನೆ ತುಂಬಾ ಇಷ್ಟ ಆಗಿತ್ತು.

Leave a Comment