ಇಂದು ಭಾರತದಲ್ಲಿ ಹೊಸ ಆರ್ಥಿಕ ವರ್ಷದ ಉದಯದ ದಿನ. ಹೊಸ ಹೊಸ ಆರ್ಥಿಕ ಬದಲಾವಣೆ, ಹೊಸ ನಿಯಮಗಳು, ಬಜೆಟ್‌ನಲ್ಲಿ ಘೋಷಣೆಯಾಗಿರೋ ಅಂಶಗಳು ಜಾರಿಯಾಗೋ ದಿನ.
ಕೇಂದ್ರ ಮೊದಲೇ ಹಲವು ಬದಲಾವಣೆಯನ್ನು ಜಾರಿ ಮಾಡಿದ್ದರಿಂದ ಈ ಸಲ ಜನತೆಗೆ ಮತ್ತಷ್ಟು ಹೊರೆ ಬೀಳಲಿದೆ.
ಹಾಗಾದರೆ ಯಾವೆಲ್ಲಾ ಬದಲಾವಣೆಯಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಐಟಿ ರಿಟರ್ನ್:
- ಇನ್ಮುಂದೆ ಪರಿಷ್ಕೃತ ಐಟಿ ರಿಟರ್ನ್‌ಗೆ 2 ವರ್ಷ ಅವಕಾಶ
- ತಪ್ಪು ತಿದ್ದುಪಡಿ ಮಾಡಲು 2 ವರ್ಷಗಳ ಅವಧಿ
ಹಿರಿಯ ನಾಗರಿಕರಿಗೆ ವಿನಾಯಿತಿ:
- 75 ವರ್ಷ ಮೇಲ್ಪಟ್ಟವರಿಗೆ ಐಟಿ ರಿಟರ್ನ್ ವಿನಾಯ್ತಿ
- ಕೆಲ ಷರತ್ತು ಪೂರೈಸಿದರೆ ಮಾತ್ರ ಇದು ಅನ್ವಯ
ಕ್ರಿಪ್ಟೋ ತೆರಿಗೆ:
- ಎಲ್ಲಾ ರೀತಿಯ ಡಿಜಿಟಲ್ ಆಸ್ತಿಗೆ ಶೇ.30ರಷ್ಟು ತೆರಿಗೆ
- ಗಿಫ್ಟ್ ರೂಪದಲ್ಲಿ ಬರೋ ಕ್ರಿಪ್ಟೋ ಕರೆನ್ಸಿಗೂ ಟ್ಯಾಕ್ಸ್
ಪಿಎಫ್‌ಗೆ ತೆರಿಗೆ :
- ವಾರ್ಷಿಕ 2.5 ಲಕ್ಷ ರೂಪಾಯಿ ದಾಟಿದ್ರೆ ಟ್ಯಾಕ್ಸ್
- ಇನ್ಮುಂದೆ ತೆರಿಗೆ, ತೆರಿಗೆ ಮುಕ್ತ ಎಂಬ 2 ಖಾತೆ
ಹೊಸ ಪಿಂಚಣಿ ಯೋಜನೆ :
- ರಾಜ್ಯ ಸರ್ಕಾರಿ ನೌಕರರ ಕೊಡುಗೆ
- ಕ್ಲೈಮ್‌ನಲ್ಲಿ ಮಾರ್ಪಾಡು, ಮೂಲ ವೇತನ
- ತುಟ್ಟಿಭತ್ಯೆಯಲ್ಲಿ ಶೇ.14ರಷ್ಟು ನೀಡಬಹುದು
- ಹಾಗೆಯೇ, ಶೇ.14ರಷ್ಟು ಹಣವನ್ನ ಹಿಂಪಡೆಯಲೂಬಹುದು
ಕೆವೈಸಿ ಕಡ್ಡಾಯ:
- ಬ್ಯಾಂಕ್ ಖಾತೆಗಳಿಗೆ ಕೆವೈಸಿ ಕಡ್ಡಾಯ
- ಕೆವೈಸಿ ಅಪ್ಡೇಡ್ ಮಾಡದ
ಅಕೌಂಟ್ ಸ್ಥಗಿತ
ಸ್ಥಿರಾಸ್ತಿ ಮಾರಾಟದ ತೆರಿಗೆ:
- 50 ಲಕ್ಷಕ್ಕಿಂತ ಹೆಚ್ಚಿನ ಆಸ್ತಿ ಮಾರಾಟಕ್ಕೆ ತೆರಿಗೆ
- ಮೂಲ ಹಣದಲ್ಲೇ ಶೇ.1ರಷ್ಟು TDS ಕಡಿತ
- ಉಳಿದ ಹಣವನ್ನು ಮಾರಾಟಗಾರರಿಗೆ ಪಾವತಿಸಬೇಕು
- ಈ ರೀತಿಯ ತೆರಿಗೆ ಕೃಷಿ ಭೂಮಿಗೆ ಅನ್ವಯ ಆಗಲ್ಲ
ಮ್ಯೂಚುಯಲ್ ಫಂಡ್ :
- ಮ್ಯೂಚುಯಲ್ ಫಂಡ್ ಲಾಭಾಂಶದ ಮೇಲೆ ತೆರಿಗೆ
- ಮ್ಯೂಚುಯಲ್ ಫಂಡ್‌ಗೆ ಎರಡು ರೀತಿಯ ತೆರಿಗೆ
- ಮ್ಯೂಚುಯಲ್ ಫಂಡ್‌ಗೆ ಡಿಜಿಟಲ್ ಪಾವತಿ ಕಡ್ಡಾಯ
ಕೋವಿಡ್ ಚಿಕಿತ್ಸಾ ವೆಚ್ಚಕ್ಕೆ ರಿಲೀಫ್ :
- ಇನ್ಮುಂದೆ ಕೋವಿಡ್ ಚಿಕಿತ್ಸಾ ವೆಚ್ಚಕ್ಕೆ ತೆರಿಗೆ ಇಲ್ಲ
- ಮೃತ ರೋಗಿಯ ಕುಟುಂಬ ಪಡೆಯುವ ಹಣಕ್ಕೂ ವಿನಾಯ್ತಿ
ಆಧಾರ್ ಲಿಂಕ್ ಕಡ್ಡಾಯ :
- ಇನ್ಮುಂದೆ ಪ್ಯಾನ್‌ಗೆ ಆಧಾರ್ ಲಿಂಕ್ ಕಡ್ಡಾಯ
- ವಿಳಂಬ ಮಾಡಿದ್ರೆ 500 ರೂಪಾಯಿ ದಂಡ
ಯಾವುದೆಲ್ಲಾ ತುಟ್ಟಿ..?
1. ಇನ್ಮುಂದೆ ಗೃಹ ಖರೀದಿಗೆ ತೆರಿಗೆ ವಿನಾಯ್ತಿ ಇಲ್ಲ
2. 800 ಅಗತ್ಯ ಔಷಧಿಗಳ ದರ ಶೇ.10ರಷ್ಟು ಹೆಚ್ಚಳ
3. ಇನ್ಮುಂದೆ ಹೊಸ ವಾಹನಗಳ ದರ ಹೆಚ್ಚಳ
4. ಏ.1ರಿಂದ ಸರ್ಕಾರಿ ವಾಹನಗಳಿಗೆ ಸ್ಕ್ರ್ಯಾಪ್ ನೀತಿ
5. ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಹೆಚ್ಚಳ.














