ಇದು ಯುಗಾದಿ!

Coastal Bulletin
ಇದು ಯುಗಾದಿ!

*ಇದು ಯುಗಾದಿ!* ~~~~~~~~~~

ಬೇವು ಚಿಗುರಿದೆ ಮಾವು ತೂಗಿದೆ

ಅದೋ ಚೈತ್ರವು ಬಂದಿದೆ!

ಹಳೆಯ ಕಹಿಯ  ನೋವು ಅಳಿದಿದೆ

ಬೆಲ್ಲ ನಮ್ಮಯ ಮುಂದಿದೆ!!


ಗಿಡ ಮರಗಳು ಹಸುರುಕ್ಕಿಸಿ

ಎದೆ‌ ಹೂವನು ತೆರೆದಿದೆ!

ಬಾ ಚೈತ್ರವೇ ಎಂದು ಕೋಗಿಲೆ

ಇಂಪು ದನಿಯಲಿ ಕರೆದಿದೆ!!


ಎಂದಿನಂತೆಯೇ ಕಾಲ ಉರುಳುತ

ಸಂತಸ

ಸಂಭ್ರಮ ತಂದಿದೆ!

ಒಳಿತನುಳಿಸುತ  ಹೊಸತು ಹೆಣೆಯಿರಿ

ಪ್ರಕೃತಿಯು ಸಂದೇಶ ಸಾರಿದೆ!!


ನವ ಹಾದಿಯಿದು ಇದು ಯುಗಾದಿ 

ಹೂಬನವರಳಿದೆ  ಮನಮನದಿ!

ಎಲ್ಲರ ಒಳಿತಿಗೆ ಹರಕೆಯ ಬೇಡುತ

ಒಲುಮೆಯ ಒಸರಿಗೆ ತೆರೆ ಹಾದಿ!! 


ಬರಹ:ವಿಶ್ವನಾಥ ಕುಲಾಲ್ ಮಿತ್ತೂರು.

ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.

Leave a Comment