ಬೆಂಗಳೂರು :ಕನ್ನಡ ಚಿತ್ರ ರಂಗದ ಹಿರಿಯ ನಟ ಶಿವರಾಂ (84) ತೀವ್ರ ಆರೋಗ್ಯ ಸಮಸ್ಯೆಯಿಂದ ಇಂದು ನಿಧನರಾದರು.ಕಳೆದ ಎರಡು ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ತಲೆಗೆ ತೀವ್ರ ಏಟಾಗಿದ್ದು, ಮೆದುಳು ನಿಷ್ಕ್ರೀಯವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.
ಅಪಘಾತದ ಬಳಿಕ ಹೊಸಕೇರೆ ಹಳ್ಳಿ ಪ್ರಶಾಂತ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬ್ರೇನ್ ಹ್ಯಾಮರೇಜ್‌ನಿಂದ ಕೋಮಾದಲ್ಲಿದ್ದ ಹಿರಿಯ ನಟ ಯಾವುದೇ ರೀತಿಯ ಚಿಕಿತ್ಸೆಗೆ ಸ್ಪಂದಿಸದೇ ಇಂದು ಕೊನೆಯುಸಿರೆಳೆದರು. ನಟ ಶಿವರಾಮ್ ಮೂರು ಗಂಡು, ಇಬ್ಬರು ಹೆಣ್ಣು
ಮಕ್ಕಳನ್ನು ಅಗಲಿದ್ದಾರೆ. ಕೆಲವು ವರ್ಷಗಳ ಹಿಂದೆಯಷ್ಟೆ ಶಿವರಾಮ್ ಅವರ ಪತ್ನಿ ತೀರಿಕೊಂಡಿದ್ದರು. ತ್ಯಾಗರಾಜನಗರದಲ್ಲಿ ವಾಸವಾಗಿದ್ದ ಶಿವರಾಮ್, ರಾಜ್ ಕುಮಾರ್ ಕುಟುಂಬಕ್ಕೆ ತುಂಬಾ ಆಪ್ತವಾಗಿತ್ತು. ಅಣ್ಣಾವ್ರ ಜೊತೆಗೆ ಹಲವು ಬಾರಿ ಶಬರಿಮಲೆ ಯಾತ್ರೆ ಕೂಡ ಮಾಡಿದ್ದರು.















