ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಎಂಟು‌ ಮಂದಿ ಆರೋಪಿಗಳ ಬಂಧನ

Coastal Bulletin
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಎಂಟು‌ ಮಂದಿ ಆರೋಪಿಗಳ ಬಂಧನ

ಮಂಗಳೂರು: ಬಜ್ಪೆಯಲ್ಲಿ ರೌಡಿಶೀಟರ್, ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಈ ಕುರಿತು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ಸಂಬಂಧ ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಸಮೀರ್, ಕಲಂದರ್ ಶಾಫಿ, ಆದಿಲ್ ಮೆಹರೂಪ್, ನಾಗರಾಜ್, ಮೊಹಮ್ಮದ್ ರಿಜ್ವಾನ್ ಮತ್ತು ರಂಜಿತ್ ಎಂಬುವರನ್ನು ಬಂಧಿಸಲಾಗಿದೆ ಎಂದರು.

ಆರು ಜನ ಸೇರಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಿದ್ದಾರೆ. ಇದರಲ್ಲಿ ಆರೋಪಿ ಅಬ್ದುಲ್ ಸಫ್ವಾನ್ ಮೇಲೆ 2023 ರಲ್ಲಿ ಮಾರಣಾಂತಿಕ ಹಲ್ಲೆಯಾಗಿತ್ತು. ಸುಹಾಸ್ ಶೆಟ್ಟಿ ಸ್ನೇಹಿತರಾದ ಪ್ರಶಾಂತ್ ಮತ್ತು ಧನರಾಜ್ ಹಲ್ಲೆ ಮಾಡಿದ್ದರು. ಇದರಿಂದ ಸಫ್ವಾನ್ಗೆ ಸುಹಾಸ್ನಿಂದ ಕೊಲೆ ಆತಂಕ ಇತ್ತು. ಈ ಹಿನ್ನಲೆ ಸುಹಾಸ್ನ್ನು ಕೊಲೆ ಮಾಡಲು ತೀರ್ಮಾನ ಮಾಡಿದ್ದ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಈ ಹಿಂದೆ ಕೊಲೆಯಾದ ಫಾಝೀಲ್ನ ಸಹೋದರ ಆದಿಲ್ ಅವರನ್ನು ಸಫ್ವಾನ್ ಸಂಪರ್ಕಿಸಿ ಕೊಲೆ ಮಾಡೋಕೆ ತೀರ್ಮಾನ ಮಾಡುತ್ತಾರೆ. ಫಾಝೀಲ್ ಅವರು 2022 ರಲ್ಲಿ ಕೊಲೆಯಾಗಿದ್ದರು. ಕೊಲೆಯ ಮುಖ್ಯ ಆರೋಪಿ ಸುಹಾಸ್ ಶೆಟ್ಟಿ. ಈ ಪ್ರಕರಣಕ್ಕೆ

ಸಂಬಂಧಿಸಿದಂತೆ ಸುಹಾಸ್ ಶೆಟ್ಟಿ ಒಂದು ವರ್ಷ ಜೈಲಿನಲ್ಲಿದ್ದು, ಕಳೆದ ವರ್ಷ ಆಚೆ ಬಂದಿದ್ದರು. ಹೀಗಾಗಿ, ಆದಿಲ್ ಹಾಗೂ ಸಫ್ವಾನ್ ಸೇರಿಕೊಂಡು ಕೊಲೆ ಮಾಡಲು ತೀರ್ಮಾನಿಸುತ್ತಾರೆ. ಈ ವೇಳೆ ಸುಹಾಸ್ ಶೆಟ್ಟಿ ಕೊಲ್ಲಲು ಸಫ್ವಾನ್ ತಂಡಕ್ಕೆ ಆದಿಲ್ 5 ಲಕ್ಷ ರೂ ಕೊಡುವ ಮಾತಾಗುತ್ತದೆ. ಜೊತಗೆ ಮುಂಗಡವಾಗಿ ಆದಿಲ್ ಅವರು ಸಫ್ವಾನ್ ತಂಡಕ್ಕೆ 3 ಲಕ್ಷ ರೂ ಕೊಟ್ಟಿದ್ದಾರೆ ಎಂದು ಹೇಳಿದರು.

ಆ ಬಳಿಕ ನಿಯಾಜ್ನ ಇಬ್ಬರು ಸ್ನೇಹಿತರು ನಾಗರಾಜ್ ಮತ್ತು ರಂಜಿತ್ನ್ನು ಸಂಪರ್ಕ ಮಾಡುತ್ತಾರೆ. ಈ ಇಬ್ಬರು 15 ದಿನಗಳ ಹಿಂದೆ ಸಫ್ವಾನ್ ಮನೆಯಲ್ಲಿ ಎರಡು ದಿನಗಳಿಂದ ವಾಸ ಮಾಡಿ, ಮೇ 1 ರಂದು ಸುಹಾಸ್ ಚಲನವಲನಗಳನ್ನು ಗಮನಿಸಿ ಕೊಲೆ ಮಾಡಿದ್ದಾರೆ ಎಂದರು.

ಕೊಲೆಯಾದ ಸಂದರ್ಭದಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರು ಆರೋಪಿಗಳಿಗೆ ಸಹಾಯ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಈ ಇಬ್ಬರು‌ ಮಹಿಳೆಯರನ್ನು‌ ಕರೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

Leave a Comment