Coastal Bulletin

ಆಸ್ಟ್ರೇಲಿಯಾದ ಕ್ರಿಕೆಟ್ ನ ದಂತಕಥೆ ಶೇನ್ ವಾರ್ನ್ (52) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ‌ .

ಮಾಜಿ ಕ್ರಿಕೆಟಿಗ ಟೆಸ್ಟ್ ಕ್ರಿಕೆಟ್ʼನ ಎರಡನೇ ಅತ್ಯಂತ ಪ್ರಭಾವಶಾಲಿ ವಿಕೆಟ್ ಟೇಕರ್ ಆಗಿದ್ದು, ಮಾತ್ರವಲ್ಲದೆ ಶ್ರೇಷ್ಠ ಬೌಲರ್ʼಗಳಲ್ಲಿ ಇವರು ಕೂಡ ಒಬ್ಬರು.

ಶೇನ್ ವಾರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್‌ ಆಗಿದ್ದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ 708 ವಿಕೆಟ್‌ ಹಾಗೂ ಏಕದಿನ ಪಂದ್ಯಗಳಲ್ಲಿ 293 ವಿಕೆಟ್‌ ಪಡೆದು ಶೇನ್ ವಾರ್ನ್ ದಾಖಲೆ ನಿರ್ಮಿಸಿದ್ದರು. ಹಾಗೂ ಆಸ್ಟ್ರೇಲಿಯಾ ಸತತ 3 ಬಾರಿ ವಿಶ್ವಕಪ್‌ ಗೆಲ್ಲುವಲ್ಲಿಯೂ ವಾರ್ನ್‌ ಪಾತ್ರ ದೊಡ್ಡದಿತ್ತು.

Leave a Comment