ದುಬೈ : ನಿನ್ನೆ ನಡೆದ 34ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ (ಡಿಸಿ) ಸನ್ ರೈಸರ್ಸ್ ಹೈದರಾಬಾದ್ (ಎಸ್ ಆರ್ ಎಚ್) ತಂಡವನ್ನು 8 ವಿಕೆಟ್‍ಗಳಿಂದ ಸೋಲಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಎಸ್ ಆರ್ ಎಚ್ 20 ಓವರ್ ಗಳಲ್ಲಿ 134/9 ಸ್ಕೋರ್ ಮಾಡಿತ್ತು, ಪ್ರತ್ಯುತ್ತರವಾಗಿ ದೆಹಲಿ ತನ್ನ ಪ್ರಬಲವಾದ ಅಗ್ರ ಕ್ರಮಾಂಕದ ಬ್ಯಾಟಿಂಗ್ ನಿಂದ SRH ತಂಡ ಹೆಚ್ಚಿನ
ಪ್ರತಿರೋಧವನ್ನು ಎದುರಿಸಲಿಲ್ಲ.
ಈ ವರ್ಷದ ಐಪಿಎಲ್‌ನ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಕ್ಯಾಪಿಟಲ್ಸ್ ಅತ್ಯುನ್ನತ ಪ್ರದರ್ಶನ ನೀಡಿ ಸಾಧಾರಣ 135 ರನ್ ಗಳ ಗುರಿಯನ್ನು ಸಾಧಿಸಿತು. ಇದರೊಂದಿಗೆ, ಡಿಸಿ ಈಗ ಐಪಿಎಲ್ 2021 ಅಂಕಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.















