ಫುಟ್‌ಬಾಲ್ ಜಗತ್ತಿನ ದಿಗ್ಗಜ ಕ್ರಿಸ್ಟಿಯಾನಾ ರೊನಾಲ್ಡೋ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ತನ್ನ ಗೆಳತಿ ಜಾರ್ಜಿನಾ ರೋರ್ಡ್ರಿಗಸ್ ಜತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಮಗೆ ಅವಳಿ ಮಕ್ಕಳು ಜನಿಸಲಿವೆ ಎಂದು ತಿಳಿಸಿದ್ದರು.
ಆದರೆ, ಇದೀಗ ಕ್ರಿಸ್ಟಿಯಾನೊ ರೊನಾಲ್ಡೊ ದುಃಖದ ವಿಚಾರವನ್ನು ಹಂಚಿಕೊಂಡಿದ್ದು, ಅವಳಿ ಮಕ್ಕಳ ಪೈಕಿ ಗಂಡು ಮಗು ನಿಧನವಾಗಿದ್ದು, ಹೆಣ್ಣು ಮಗು ಬದುಕುಳಿದಿದೆ. ಈ ವಿಷಯವನ್ನು ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ
ಮಗುವಿನ ನಿಧನದಿಂದ ದುಃಖಕ್ಕೀಡಾಗಿರುವ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಜಾರ್ಜಿನಾ ರೋರ್ಡ್ರಿಗಸ್ ಈ ವಿಷಯದ ಕುರಿತು ಗೌಪತ್ಯೆಯನ್ನು ಬಯಸಿದ್ದಾರೆ ಹಾಗೂ ತಮ್ಮ ಹೆಣ್ಣು ಮಗುವನ್ನು ದೇವತೆ ಎಂದಿದ್ದು, ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.














