ಬಂಟ್ವಾಳ:ಜೆಸಿಐ ಬಂಟ್ವಾಳ ಹಾಗೂ ನಗರ ಪ್ರಾಥಮಿಕ ಅರೋಗ್ಯ ಕೇಂದ್ರ ಬಂಟ್ವಾಳ ಇವರ ಜಂಟಿ ಆಶ್ರಯದಲ್ಲಿ ಯೋಗ ಶಿಬಿರವು ಬಿ ಹೆಚ್ ಬಿ ಟವರ್ ಕೈಕಂಬದಲ್ಲಿ ಇತ್ತೀಚಿಗೆ ನಡೆಯಿತು.
ತರಬೇತುದಾರ ವಿನಯ ಕೃಷ್ಣ ಪ್ರಸ್ತವಿಕ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ಜಯಂತಿ ವಸಂತ ರಾಜಪಲ್ಕೆ, ಅಧ್ಯಕ್ಷರು ಆರೋಗ್ಯ ರಕ್ಷಾ ಸಮಿತಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಂಟ್ವಾಳ ಆಗಮಿಸಿದ್ದರು,
ಜೆಸಿಐ ಬಂಟ್ವಾಳ ಉಪಾಧ್ಯಕ್ಷ ಜೆಸಿ ಕಿಶೋರ್ ಆಚಾರ್ಯ.ನಗರ ಪ್ರಾಥಮಿಕ ಅರೋಗ್ಯ ಕೇಂದ್ರ ವೈದ್ಯಧಿಕಾರಿ ಡಾ ಅಶ್ವಿನಿ ಕುಲಾಲ್,ಜೆಸಿಐ
ಬಂಟ್ವಾಳ ನಿಕಟ ಪೂರ್ವ ಅಧ್ಯಕ್ಷ ಜೆಸಿ ಉಮೇಶ್ ಆರ್ ಮೂಲ್ಯ,ಕಾರ್ಯಕ್ರಮ ನಿರ್ದೇಶಕರಾದ ಜೆಸಿ ಬಬಿತ ಅಶ್ವಿನ್ ಉಪಸ್ಥಿತರಿದ್ದರು.
ಜೆಸಿ ದೀಪ್ತಿ ರೋಷನ್ ಕಾರ್ಯಕ್ರಮ ಸಂಯೋಜನೆ ಮಾಡಿ, ಜೆಸಿ ಮನೋಜ್ ಕನಪಾಡಿ ವಂದಿಸಿದರು.ಜೆಸಿಐ ಬಂಟ್ವಾಳ ಸದಸ್ಯರು ನಗರ ಪ್ರಾಥಮಿಕ ಅರೋಗ್ಯ ಸಿಬ್ಬಂದಿಗಳು, ಯೋಗ ಶಿಬಿರಾರ್ಥಿಗಳು ಹಾಗೂ ಮತ್ತಿತರರು ಭಾಗವಹಿಸಿದರು.














