ಮನೆಯೊಳಕ್ಕೆ ನುಗ್ಗಿದ ದರೋಡೆಕೋರರು ಮನೆಯ ಮಂದಿಗೆ ಬಂದೂಕು ತೋರಿಸಿ ದರೋಡೆ ಮಾಡಿದ ಘಟನೆ ದೆಹಲಿಯ ಉತ್ತಮ್ ನಗರದಲ್ಲಿ ನಡೆದಿದೆ.ಈ ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ನಾಲ್ವರು ದರೋಡೆಕೋರರ ತಂಡ ಎಲೆಕ್ನಿಷಿಯನ್ ಎಂದು ಪರಿಚಯಿಸಿಕೊಂಡು ಮನೆಯೊಳಕ್ಕೆ ಬಂದು ಈ ಕೃತ್ಯ ಎಸಗಿದ್ದಾರೆ. ಮನೆಯೊಳಗಿದ್ದ ದಂಪತಿ ಹಾಗೂ ಚಿಕ್ಕ ಮಗುವಿಗೆ ಗನ್
ಪಾಯಿಂಟ್ ಇಟ್ಟು ಪತಿಯ ಕೈಗೆ, ಕಾಲು ಕಟ್ಟಿಹಾಕಿ ದರೋಡೆ ಮಾಡಿದ್ದಾರೆ. ಇವೆಲ್ಲವೂ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.















