Coastal Bulletin

ಜನರು ಹಲವಾರು ಉದ್ದೇಶ ಇಟ್ಟುಕೊಂಡು LIC ಪಾಲಿಸಿ ಮಾಡಿಕೊಂಡಿರುತ್ತಾರೆ. ಕೆಲವೊಮ್ಮೆ LIC ಏಜೆಂಟ್ ಗಳ ಒತ್ತಾಯಕ್ಕೂ ಜನರು ಪಾಲಿಸಿ ಮಾಡುವುದುಂಟು. ಒಟ್ಟಾರೆಯಾಗಿ LIC ಪಾಲಿಸಿ ಮಾಡಿಕೊಂಡವರ ಸಂಖ್ಯೆ ಸಾಕಷ್ಟಿದೆ. ಈಗ ಇವರಿಗೆ ಒಂದು ಸಂತಸದ ಸುದ್ದಿ ಸಿಗಲಿದೆ. ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮದ ಬಹು ನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆ ಬಿಡ್ಡಿಂಗ್‌ನಲ್ಲಿ ಭಾಗವಹಿಸುವ ಎಲ್‌ಐಸಿ ವಿಮೆಯ ಪಾಲಿಸಿದಾರರಿಗೆ ರಿಯಾಯಿತಿ ಸಿಗಲಿದೆ ಎಂದು ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ  ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಈ ವಾರದ ಕೊನೆಯಲ್ಲಿ LIC IPOಗಾಗಿ ಮಾರುಕಟ್ಟೆ ನಿಯಂತ್ರಕ ಸೆಬಿಗೆ ತನ್ನ ಕರಡು ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಅಥವಾ DHRP ಅನ್ನು ಸಲ್ಲಿಸಲು ಸರ್ಕಾರವು ತಯಾರಿ ನಡೆಸುತ್ತಿರುವಾಗ ಈ ಹೇಳಿಕೆ ಹೊರಹೊಮ್ಮಿರುವುದು

ಪ್ರಮುಖವಾಗಿದೆ. "ರೀಟೇಲ್‌ ವಿಂಡೋದ ಅಡಿಯಲ್ಲಿ, ನಿರ್ದಿಷ್ಟ ಮೀಸಲಾತಿ ಇದೆ. ನಮ್ಮಲ್ಲಿ ಪಾಲಿಸಿದಾರರ ವಿಂಡೋ ಕೂಡ ಇದೆ. ನಾವು LIC ಕಾಯಿದೆಯ ಅಡಿಯಲ್ಲಿ ನಿಬಂಧನೆಗಳನ್ನು ಮಾಡಿದ್ದು, ಪಾಲಿಸಿದಾರರಿಗೆ 10 ಪ್ರತಿಶತದಷ್ಟು ವಿತರಣೆಯನ್ನು ಸ್ಪರ್ಧಾತ್ಮಕ ಆಧಾರದ ಮೇಲೆ ಕೆಲವು ರಿಯಾಯಿತಿಯಲ್ಲಿ ನೀಡಬಹುದು. ಉದ್ಯೋಗಿಗಳಿಗೂ ಮೀಸಲಾತಿ ಇರುತ್ತದೆ" ಎಂದು ಪಾಂಡೆ ಹೇಳಿದ್ದಾರೆಂದು ಲೈವ್‌ಮಿಂಟ್ ವರದಿ ಮಾಡಿದೆ.


Leave a Comment