breaking news
  ರಾಜ್ಯಾದ್ಯಂತ ಹೆಣ್ಣು ಮಕ್ಕಳ ಸರಣಿ ಕೊಲೆಗಳು,ಅನುಮಾನಸ್ಪದ ಸಾವುಗಳು,ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ- ಕಾಂಗ್ರೆಸ್ ಸರಕಾರದ ವಿರುದ್ಧ ಬಿವೈ ವಿಜಯೇಂದ್ರ ಆಕ್ರೋಶ.|   Natural Ice Cream ಮಾಲಿಕ'ಐಸ್‌ಕ್ರೀಂ ಮ್ಯಾನ್‌ ' ಖ್ಯಾತಿಯ ರಘುನಂದನ್ ಶ್ರೀನಿವಾಸ್ ಕಾಮತ್ ನಿಧನ.|   ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ - ಡಿಕೆಶಿ ನನಗೆ 100 ಕೋಟಿ ಆಫರ್ ಮಾಡಿದ್ರು, ದೇವರಾಜೇ ಗೌಡ ಗಂಭೀರ ಆರೋಪ.|   ಐಸಿಸ್ ನಂಟು ಹೊಂದಿರುವ ಆರೋಪ ಉಳ್ಳಾಲದ ಮಾಜಿ ಶಾಸಕ ದಿ. ಇದಿನಬ್ಬರ ಮೊಮ್ಮಗನಿಗೆ ಜಾಮೀನು.|   ಮಗುವನ್ನು ಕಾರಿನಲ್ಲೇ ಮರೆತು ಮದುವೆಗೆ ಹೋದ ದಂಪತಿ, ಉಸಿರುಗಟ್ಟಿ ಸಾವು.|   ಕೇರಳದಲ್ಲಿ ಹೆಪಟೈಟಿಸ್ ಎ ಪ್ರಕರಣಗಳ ಏರಿಕೆ ಹಿನ್ನೆಲೆ, 4 ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ ಆರೋಗ್ಯ ಇಲಾಖೆ.|   CAA ಅಡಿಯಲ್ಲಿ ಮೊದಲ ಬಾರಿಗೆ 14 ಜನರಿಗೆ ಭಾರತೀಯ ಪೌರತ್ವ ನೀಡಿದ ಕೇಂದ್ರ ಸರಕಾರ.|

ರಾಮ ಮಂದಿರ ಭೇಟಿಗೆ ಪಕ್ಷದವರಿಂದ ವಿರೋಧ; ಕಾಂಗ್ರೆಸ್‌ ವಕ್ತಾರೆ ರಾಧಿಕಾ ಖೇರಾ ರಾಜೀನಾಮೆ

Coastal Bulletin
ರಾಮ ಮಂದಿರ ಭೇಟಿಗೆ ಪಕ್ಷದವರಿಂದ ವಿರೋಧ; ಕಾಂಗ್ರೆಸ್‌ ವಕ್ತಾರೆ ರಾಧಿಕಾ ಖೇರಾ ರಾಜೀನಾಮೆ

ನವದೆಹಲಿ: ಕಾಂಗ್ರೆಸ್ ವಕ್ತಾರೆ ಹಾಗೂ ಛತ್ತೀಸ್‌ಗಢ ರಾಜ್ಯ ಘಟಕದ ಕಚೇರಿಯಲ್ಲಿ ಕಾಂಗ್ರೆಸ್‌ ಮಾಧ್ಯಮ ವಿಭಾಗದ ರಾಷ್ಟ್ರೀಯ ಸಂಯೋಜಕಿಯಾಗಿರುವ ರಾಧಿಕಾ ಖೇರಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಭಾನುವಾರ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರ ಬರೆದಿರುವ ಖೇರಾ, ತಾವು ಇತ್ತೀಚಿಗೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕಾಗಿ ಪಕ್ಷದಲ್ಲಿ ತೀವ್ರ ವಿರೋಧ ಎದುರಿಸುತ್ತಿರುವುದಾಗಿ ಹೇಳಿದ್ದಾರೆ. "ಧರ್ಮವನ್ನು ಬೆಂಬಲಿಸುವವರನ್ನು ವಿರೋಧಿಸುವುದು ಪುರಾತನ ಕಾಲದಿಂದಲೂ ನಡೆದುಬಂದ ಸತ್ಯ. ಹಿರಣ್ಯಕಶಿಪುವಿನಿಂದ ರಾವಣ ಮತ್ತು ಕಂಸನವರೆಗೆ ಇಂತಹ ಉದಾಹರಣೆಗಳು ಇವೆ. ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕಾಗಿ ರಾಜ್ಯ ಘಟಕದಲ್ಲಿ ನನ್ನನ್ನು ಹೀನಾಯವಾಗಿ ನಡೆಸಿಕೊಳ್ಳಲಾಯಿತು" ಎಂದು ಖೇರಾ ಅವರು ಖರ್ಗೆಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.

ನಾನು ನನ್ನ ಜೀವನದ 22 ವರ್ಷಗಳಿಗಿಂತ ಹೆಚ್ಚು ಸಮಯವನ್ನು ಕಾಂಗ್ರೆಸ್​ ಪಕ್ಷಕ್ಕೆ ನೀಡಿದ್ದೇನೆ. NSUI ನಿಂದ ಕಾಂಗ್ರೆಸ್‌ನ ಮಾಧ್ಯಮ ವಿಭಾಗದವರೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರೂ, ನಾನು ಅಯೋಧ್ಯೆ ರಾಮನನ್ನು ಬೆಂಬಲಿಸುತ್ತಿರುವ ಕಾರಣ ತೀವ್ರ ವಿರೋಧವನ್ನು ಎದುರಿಸಬೇಕಾಯಿತು ಎಂದು ಖೇರಾ ಆರೋಪಿಸಿದ್ದಾರೆ.

ಮೂರನೇ ಹಂತದ ಲೋಕಸಭೆ ಚುನಾವಣೆಗೆ ಕೇವಲ 2 ದಿನಗಳಿರುವಾಗ ರಾಧಿಕಾ ಖೇರಾ ಅವರ ಆರೋಪಗಳು ಸಾಕಷ್ಟು ಮಹತ್ವ ಪಡೆದುಕೊಂಡಿದೆ.

Leave a Comment