ಮಗುವನ್ನು ಕಾರಿನಲ್ಲೇ ಮರೆತು ಮದುವೆಗೆ ಹೋದ ದಂಪತಿ, ಉಸಿರುಗಟ್ಟಿ ಸಾವು.

Coastal Bulletin
ಮಗುವನ್ನು ಕಾರಿನಲ್ಲೇ ಮರೆತು ಮದುವೆಗೆ ಹೋದ ದಂಪತಿ, ಉಸಿರುಗಟ್ಟಿ ಸಾವು.

ಪೋಷಕರು ಮಾಡಿದ ತಪ್ಪಿನಿಂದ ಮುದ್ದು ಮಗು ಸಾವನ್ನಪ್ಪಿದೆ. ಮದುವೆ ಕಾರ್ಯಕ್ರಮಕ್ಕೆಂದು ಹೋಗಿದ್ದ ದಂಪತಿ ಮಗುವನ್ನು ಕಾರಿನಲ್ಲೇ ಮರೆತು ಹೋದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಕೋಟಾದಲ್ಲಿ ನಡೆದಿದೆ.

ಮಗುವನ್ನು ಕಾರಿನಲ್ಲೇ ಮರೆತು ದಂಪತಿ ಮದುವೆಗೆ ಹೋಗಿದ್ದು, ಹಿಂದಿರುಗುವಷ್ಟರಲ್ಲಿ ಹೆಣ್ಣುಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. 3 ವರ್ಷದ ಮಗು ಅದಾಗಿದ್ದು, ಗೋರ್ವಿಕಾ ನಗರ್ ಎಂದು ಗುರುತಿಸಲಾಗಿದೆ, ಬುಧವಾರ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ತಂದೆ ಪ್ರದೀಪ್ ನಗರ್ ತನ್ನ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಮನೆಯವರು ಸ್ಥಳಕ್ಕೆ ಬರುತ್ತಿದ್ದಂತೆ ತಾಯಿ ಮತ್ತು ಹಿರಿಯ ಮಗಳು ಕಾರಿನಿಂದ ಹೊರಬಂದರು.

ನಂತರ ಪ್ರದೀಪ್ ನಗರ್ ಕಾರು ಪಾರ್ಕ್​ ಮಾಡಲು ತೆರಳಿದ್ದರು ಎಂದು ಖತೋಲಿ ಪೊಲೀಸ್ ಠಾಣೆ ಎಸ್‌ಎಚ್‌ಒ ಬನ್ನಾ ಲಾಲ್ ತಿಳಿಸಿದ್ದಾರೆ.

ಇಬ್ಬರು ಹೆಣ್ಣುಮಕ್ಕಳು ತಮ್ಮ ತಾಯಿಯೊಂದಿಗೆ ಒಳಗೆ

ಹೋಗಿದ್ದಾರೆ ಎಂದು ಭಾವಿಸಿ, ತಂದೆ ಕಾರನ್ನು ಲಾಕ್ ಮಾಡಿ ಸಮಾರಂಭಕ್ಕೆ ತೆರಳಿದ್ದರು. ತಂದೆ ಜತೆ ಮಗಳು ಬರುತ್ತಾಳೆ ಎಂದು ತಾಯಿಯೂ ಅಂದುಕೊಂಡಿದ್ದರು.ಸುಮಾರು ಎರಡು ಗಂಟೆಗಳ ಕಾಲ, ಇಬ್ಬರೂ ವಿವಿಧ ಸಂಬಂಧಿಕರನ್ನು ಭೇಟಿಯಾದಾಗ ಅದರಲ್ಲಿ ಒಬ್ಬರು ಕಿರಿಯ ಮಗಳು ಗೋರ್ವಿಕಾ ಬಗ್ಗೆ ವಿಚಾರಿಸಿದ್ದರು. ಆಕೆ ಇಬ್ಬರೊಂದಿಗೂ ಇರಲಿಲ್ಲ, ಆಗ ಇಬ್ಬರೂ ಹುಡುಕಾಟ ಆರಂಭಿಸಿದ್ದರು.

ಮದುವೆ ಮನೆಗೆ ಬಂದು ಗಂಟೆಗಳ ಬಳಿಕ ಅವರು ಗೋರ್ವಿಕಾಳನ್ನು ಹುಡುಕುತ್ತಾ ಕಾರಿನತ್ತ ಮರಳಿದ್ದರು. ಕಾರಿನ ಹಿಂಬದಿಯ ಸೀಟಿನಲ್ಲಿ ಆಕೆ ಪ್ರಜ್ಞಾಹೀನಳಾಗಿರುವುದನ್ನು ಕಂಡು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಗೆ ಆಗಮಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಪೋಷಕರು ಶವಪರೀಕ್ಷೆ ನಡೆಸಲು ನಿರಾಕರಿಸಿದ್ದಾರೆ ಮತ್ತು ಪೊಲೀಸರು ಪ್ರಕರಣವನ್ನು ದಾಖಲಿಸದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Comment