ಬಂಟ್ವಾಳ :ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಹಾಗೂ ಮಹಿಳಾ ವೇದಿಕೆ ಶ್ರೀ ಗುರುಸದನ,ಪುದು ಕುಮ್ಮೇಲು ಇದರ ದಶಮಾನೋತ್ಸವ ಸಂಭ್ರಮ ಸಮಾರಂಭವು ಮೇ 19ರಂದು ರವಿವಾರ ಸಂಜೆ ಗಂಟೆ 5ರಿಂದ ಗುರು ಸದನದ ಮುಂಭಾಗ, ಕುಮ್ದೇಲ್ ನಲ್ಲಿ ನಡೆಯಲಿದೆ.
ಸಂಜೆ ಗಂಟೆ 5.00ಕ್ಕೆ ಬ್ರಹ್ಮ ಶ್ರೀ ನಾರಾಯಣಗುರು ವೇದಿಕೆಯ 'ನಾಟ್ಯಲಹರಿ ನೃತ್ಯ ತಂಡ'ದ ವಿದ್ಯಾರ್ಥಿಗಳಿಂದ ಮತ್ತು ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ 6ರಿಂದ ದಶಮಾನೋತ್ಸವ ಸಭಾ ಸಮಾರಂಭವು ಶ್ರೀ ಶ್ರೀ ಕೃಷ್ಣ ಗುರೂಜಿ ಧರ್ಮದರ್ಶಿ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ ಕುಕ್ಕಾಜೆ ಮಾಣಿಲ ಇವರ ಗೌರವ ಉಪಸ್ಥಿತಿ ನಡೆಯಲಿದೆ, ಅಧ್ಯಕ್ಷತೆಯನ್ನು ಬಾಬು ಪೂಜಾರಿ,ಕೊಡಂಗೆ ಅಧ್ಯಕ್ಷರು,ಬ್ರಹ್ಮ ಶ್ರೀ
ನಾರಾಯಣ ಗುರು ವೇದಿಕೆ, ಪುದು ಇವರು ವಹಿಸಲಿದ್ದಾರೆ,
ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ, ಗೌರವ ಅಭಿನಂದನೆ ಹಾಗೂ ಆರ್ಥಿಕ ಸಹಾಯಧನ ವಿತರಣಾ ಕಾರ್ಯಕ್ರಮ ನಡೆಯಲಿದೆ ಅನೇಕ ಗಣ್ಯ ಅತಿಥಿಗಳು ಈ ಕಾರ್ಯದಲ್ಲಿ ಭಾಗಿಯಾಗಳಿದ್ದಾರೆ.
ರಾತ್ರಿ ಗಂಟೆ 8.30ಕ್ಕೆ ಶಾರದ ಆರ್ಟ್ಸ್ ಕಲಾವಿದರು, ಮಂಜೇಶ್ವರ ಇವರಿಂದ ತುಳು ಹಾಸ್ಯಮಯ ನಾಟಕ"ಕಥೆ ಎಡ್ಡೆಂಡು"ಪ್ರದರ್ಶನಗೊಳ್ಳಲಿದೆ ಎಂದು ಸಮಿತಿಯ ಪ್ರ ಕಾರ್ಯದರ್ಶಿ ಕಿಶೋರ್ ಸುಜೀರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.