ಬಂಟ್ವಾಳ :ಕರ್ನಾಟಕ ಜಾನಪದ ಪರಿಷತ್ತಿನ ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಮೇ 19ರಂದು ಬಿ.ಸಿ.ರೋಡು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯುವ "ಪತ್ತನಾಜೆ" ಜಾನಪದ ಹಬ್ಬದಲ್ಲಿ ಆಹಾರ ಮೇಳ ಹಾಗೂ ವಸ್ತು ಪ್ರದರ್ಶನ ಆಯೋಜಿಸಲಾಗಿದೆ.
ಮೇಳದಲ್ಲಿ ಸಾಂಪ್ರದಾಯಿಕ ಹಾಗೂ ಸಹಜ ಶೈಲಿಯ ತಿಂಡಿತಿನಸುಗಳು, ಆಹಾರ ಖಾದ್ಯಗಳು, ಜನಪದರ ಬದುಕನ್ನು ಪ್ರತಿಬಿಂಬಿಸು ವಸ್ತುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.ಆಹಾರ ಮೇಳ ಮತ್ತು ವಸ್ತುಪ್ರದರ್ಶನಲ್ಲಿ ಭಾಗವಹಿಸುವವರು ಮೇ
10 ರ ಒಳಗಾಗಿ 9845625914, 9449104318 ಕರೆ ಮಾಡಿ ತಮ್ಮ ಹೆಸರನ್ನು ನೊಂದಾಯಿಸ ಬಹುದಾಗಿದೆ ಎಂದು ಜಾನಪದ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷೆ ಪ್ರಮೀಳಾ ಮಾಣೂರು (ಸಾಯಿಪ್ರಿಯ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









