Coastal Bulletin

ಲಂಡನ್: ಬ್ರಿಟನ್ ರಾಣಿ ಎಲಿಜಬೆತ್-2 ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಬ್ರಿಟನ್​ನ ರಾಣಿ ಎರಡನೇ ಎಲಿಜಬೆತ್ ಅವರು  ಸೆಪ್ಟೆಂಬರ್ 8 ರಂದು ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. ಅವರ ನಿಧನ ವಾರ್ತೆಯನ್ನು ಬಂಕಿಂಗ್ ಹ್ಯಾಮ್ ಅರಮನೆಯವರು ಖಚಿತಪಡಿಸಿದ್ದಾರೆ.

ಬ್ರಿಟನ್​ನ ಅನ್ನು ಎರಡನೇ ಎಲಿಜಬೆತ್​ ಅವರು ಏಳು ದಶಕಗಳ ಕಾಲ ಆಳಿದ್ದರು ಅನ್ನೋದು ವಿಶೇಷ. ಎಲಿಜಬೆತ್ ಅವರು 1952ರಲ್ಲಿ ಈ ಪಟ್ಟಕ್ಕೆ ಏರಿದರು.  ತಂದೆ ಕಿಂಗ್ ಜಾರ್ಜ್​ VI ನಿಧನದ ನಂತರದಲ್ಲಿ ಅವರಿಗೆ

ಅಧಿಕಾರ ಸಿಕ್ಕಿತು. ನಂತರ 70 ವರ್ಷಗಳ ಕಾಲ ರಡನೇ ಎಲಿಜಬೆತ್ ಈ ಸ್ಥಾನದಲ್ಲಿದ್ದರು.

ಗುರುವಾರ ಎರಡನೇ ಎಲಿಜಬೆತ್ ಅವರ ಆರೋಗ್ಯ ತೀವ್ರಗತಿಯಲ್ಲಿ ಹದಗೆಟ್ಟಿತ್ತು. ಅವರನ್ನು ಬ್ರಿಟನ್‌ನ ಬಲ್‌ಮೋರಾಲ್‌ನಲ್ಲಿ ವೈದ್ಯರ ತಂಡ ಸೂಕ್ತ ಚಿಕಿತ್ಸೆ ನೀಡಿತ್ತು. ಆದರೆ, ವೈದ್ಯರ ಚಿಕಿತ್ಸೆ ಫಲಿಸಲಿಲ್ಲ. ಅವರ ನಿಧನ ವಾರ್ತೆಯನ್ನು ಬಂಕಿಂಗ್ ಹ್ಯಾಮ್ ಅರಮನೆ ಪ್ರಕಟಿಸುತ್ತಿದ್ದಂತೆ ಬ್ರಿಟನ್​ನಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ದೇಶದ ಗಣ್ಯರು ಎಲಿಜಬೇತ್ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

Leave a Comment