Coastal Bulletin

ಬಂಟ್ವಾಳ : ಶ್ರೀ ಕ್ಷೆ.ಧ ಗ್ರಾ ಯೋಜನೆ ಬಂಟ್ವಾಳ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಸಾರ್ವಜನಿಕ ರುದ್ರ ಭೂಮಿಯಲ್ಲಿ ಸಾಮಾಜಿಕ ಅರಣ್ಯ ಕಾರ್ಯಕ್ರಮದಡಿಯಲ್ಲಿ ಗಿಡನಾಟಿಯನ್ನು ಗ್ರಾಮಾಭಿವೃದ್ದಿ ಯೋಜನೆಯ ದ.ಕ ಜಿಲ್ಲಾ ನಿರ್ದೇಶಕರು ಗಿಡ ನಾಟಿ ಮಾಡುವುದರ ಮೂಲಕ ಚಾಲನೆ ನೀಡಿದರು. ಸುಮಾರು 100 ಗಿಡ ನಾಟಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗ್ರಾ.ಪಂಚಾಯತ್ ಕಾರ್ಯದರ್ಶಿ ಶ್ರೀ ವಸಂತ ಪೂಜಾರಿ,ಕೇಂದ್ರ ಒಕ್ಕೂಟದ ಮಾಜಿ ಅದ್ಯಕ್ಷರಾದ ಸದಾನಂದ ಗೌಡ,ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಜಯಾನಂದ್ ಪಿ,ಗ್ರಾ ಪಂಚಾಯತ್ ಸದಸ್ಯರಾದ ಜನಾರ್ದನ, ಕೊಂಬೆಟ್ಟು,ಯೋಗಿಶ್ ಪಡೀಲ್ ಬೈಲು,ಒಕ್ಕೂಟದ ಅದ್ಯಕ್ಷರಾದ ವಸಂತ

ಮೂಲ್ಯ, ಸಂತೋಷ, ಪುರಸಭೆಯ ಸದಸ್ಯರಾದ ಜನಾರ್ದನ ಚಂಡ್ತಿಮಾರ್,ಜನ ಜಾಗೃತಿ ಸದಸ್ಯರಾದ ರಾಜೀವಿ ಕೃಷಿ ಮೇಲ್ವಿಚಾರಕ ಜನಾರ್ದನ, ಸೇವಾಪ್ರತಿನಿಧಿ ಅಂಬಿಕಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ಕೇಶವ ಕೆ ಸ್ವಾಗತಿಸಿ, ಸೇವಾಪ್ರತಿನಿಧಿ ವಿಜಯ ವಂದಿಸಿದರು.

Leave a Comment